ಪ್ರಳಯಭಾದಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮತ್ತು ಪೋಲಿಸ್ ವರಿಷ್ಠಾಧಿಕಾರಿ ಭೇಟಿ

ಕಳೆದ ಕೆಲವು ವರ್ಷಗಳ ಮಳೆಗಾಲದಲ್ಲಿ ಪ್ರಳಯ ಭಾದೆಯಿಂದ ಮನೆಹಾನಿ ಸೇರಿದಂತೆ ತೀವ್ರ ನಾಶನಷ್ಷ ಉಂಟಾದ ಕಾವೇರಿ ನದೀದಡದ ಕರಡಿಗೋಡು ಗ್ರಾಮಕ್ಕೆ ಇಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ಕ್ಷಮಾ ಮಿಶ್ರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಳೆಗಾಲದಲ್ಲಿ ಪ್ರವಾಹ ಆಗುವ ಸಾಧ್ಯತೆ ಇದ್ದರೆ ಕೈಗೊಳ್ಳಬೇಕಾದ ಸುರಕ್ಷತೆಯ ಕ್ರಮದ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸಿ ಗಣಪತಿ ಮೊದಲಾದವರ ಹತ್ತಿರ ಚರ್ಚಿಸಿದರು.

ಕಳೆದ ಸಾಲಿನ ಪ್ರವಾಹದ ಸಮಯದಲ್ಲಿ ನಿರಾಶ್ರಿತರ ಶಿಬಿರದ ಮಾಹಿತಿಗಳನ್ನು ಸಮಾಜಸೇವಕರಾದ ಪ್ರವೀಣ್ ಸಿದ್ಧಾಪುರ ರವರಿಂದ ಪಡೆದುಕೊಂಡ ಜಿಲ್ಲಾಧಿಕಾರಿ ಈ ಭಾರಿ ಕೂಡಾ ಪ್ರವಾಹ ಏನಾದರೂ ಆದಲ್ಲಿ ಸ್ವಯಂಸೇವಕರು ತಾವಾಗಿಯೇ ಮುಂದೆ ಬಂದು ಗ್ರಾಮಸ್ಥರೊಂದಿಗೆ ಕೈ ಜೋಡಿಸಿ ನೆರವಾಗಬೇಕು, ಯಾವುದೇ ಸಂಧರ್ಭದಲ್ಲಿ ಕೂಡಾ ಹೆಚ್ಚಿನ ನಿರಾಶ್ರಿತ ಶಿಬಿರಗಳನ್ನು ಮತ್ತು ಅದಕ್ಕೆ ಬೇಕಾದ ವಸ್ತುಗಳನ್ನು ಒದಗಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಅಂಥ ತಿಳಿಸಿದರು.

ಈ ಸಂದರ್ಭದಲ್ಲಿ ಮಳೆಹಾನಿಯಿಂದ ತುಂಬಾ ಮನೆಗಳು ನಾಶವಾಗಿದ್ದು, ವಸತಿರಹಿತ ನಿರಾಶ್ರಿತರು ಅನುಭವಿಸುವ ಸಮಸ್ಯೆಗಳು ಪ್ರವೀಣ್ ಮತ್ತು ಸಮಾಜಸೇವಕ ಕುಕ್ಕುನ್ನೂರು ರಂಜನ್ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ, ಪೂವಮ್ಮ, ನಿಖಿಲ್ ಮೊದಲಾದವರು ಹಾಜರಿದ್ದರು

error: Content is protected !!