ಪ್ರಳಯದಲ್ಲಿ ಮರ ಮಾರಿದ ಹಣದಲ್ಲಿ ಜನಸೇವೆ ಮಾಡುತ್ತಿದ್ದೇನೆ : ಶಾಸಕ ಅಪಚ್ಚು ರಂಜನ್

ಕೊಡಗು: 2018ರಲ್ಲಿ ನಡೆದ ಜಲಪ್ರಳಯದಿಂದ ನನ್ನ ತೋಟ ಸಂಪೂರ್ಣ ನಾಶವಾಯಿತು ಅದರಲ್ಲಿ ಉರುಳಿದ ಮರಗಳನ್ನು ಮಾರಾಟ ಮಾಡಿದ್ದರಿಂದ ಬಂದ 18 ಲಕ್ಷರೂ ಗಳಲ್ಲಿ ಹಲವು ಕುಟುಂಬಗಳಿಗೆ ಅಲ್ಪಪ್ರಮಾಣದ ದಿನಸಿ ಪದಾರ್ಥ ನೀಡುವ ಪ್ರಯತ್ನ ಮಾಡಿದ್ದೇನೆ ಎಂದು ಶಾಸಕ ಅಪಚ್ಚು ರಂಜನ್ ತಿಳಿಸಿದ್ದಾರೆ.

64ನೆ ಸಂವತ್ಸರಕ್ಕೆ ಕಾಲಿರಿಸಿದ ಮಡಿಕೇರಿ ಕ್ಷೇತ್ರ ಶಾಸಕರು ಪಟ್ಟಣದ ಸಾಕ್ಷಿ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು, ಗಣ್ಯರು ಶುಭಹಾರೈಸಿದ ಬಳಿಕ
ಹುಟ್ಟುಹಬ್ಬದ ಸಂಭ್ರಮದಲಿದ್ದ ಶಾಸಕ ರಂಜ ನ್ ರಿಗೆ ಮಹಿಳೆಯರು ಆರತಿ ಮಾಡಿ ಶುಭ ಹಾರೈಸಿದರು. ಮಿಥುನ್ ಶಾಸ್ತ್ರಿಗಳ ವೇದಘೋಷಗಳೊಂದಿಗೆ ಕೊಡ್ಲಿಪೇಟೆ ಕಿರಿಕೊಡ್ಲಿಮಠಾದೀಶ ರಾದ ಶ್ರಿ. ಸದಾಶಿವಸ್ವಾಮೀಜಿ,ಕಲ್ಲುಮಠದ ಮಹಾಂತ ಸ್ವಾಮೀಜಿ, ರಾವoದೂರು ವಿರಕ್ತ ಮಠದ ಶ್ರಿ. ಮೋಕ್ಷಪತಿ ಸ್ವಾಮೀಜಿ, ಶಿಡಿಗಳಲೇ ಮಠದ ಶ್ರಿ. ಇಮ್ಮಡಿಶಿವಲಿಂಗ ಸ್ವಾಮೀಜಿ. ಪುಷ್ಪವೃಷ್ಟಿ ಮಾಡಿ ಆಶೀರ್ವದಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ರಂಜನ್ ಜನಸೇವೆಯೇ ಜನಾರ್ದನಸೇವೆ ಎಂದು ನಂಬಿದವನು ನಾನು ಎಂದರು.
ಈ ಸಂದರ್ಭ ತಹಶೀಲ್ದಾರ್ ಗೋವಿಂದರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿ.ಪಂ.ಮಾಜಿ ಉಪಾದ್ಯೆಕ್ಷೆ ಲೋಕೇಶ್ವರಿಗೋಪಾಲ್,ಪಟ್ಟಣಪಂಚಾಯ್ತಿ ಪ್ರಭಾರ ಅಧ್ಯಕ್ಷ ಸಂಜೀವ, ಸದಸ್ಯೆ ಶೀಲಾಡಿಸೋಜ, ನಿವೃತ್ತ ಪ್ರಾಂಶುಪಾಲ ಧರ್ಮಪ್ಪ, ರೋಟರಿ ಸಂಸ್ಥೆಯ ಸಹಾಯಕ ರಾಜ್ಯಪಾಲ ಪಿ.ಕೆ.ರವಿ, ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಮನುಕುಮಾರ್ ರೈ,ಉದ್ಯಮಿ ಬಿ.ಎಸ್.ಸುಂದರ್,ಗುತ್ತಿಗೆದಾರ ವೈ.ಬಿ.ಮಹದೇವ,ಪ್ರಮುಕರುಗಳಾದ ಜಿ.ಎಸ್.ಪ್ರಭುದೇವ, ಡಿ. ವಿ. ಸದಾನಂದ,ಚೌಡ್ಲು ಗ್ರಾ.ಪಂ.ಉಪಾಧ್ಯಕ್ಷ ಮಂಜುಳಾ ಸುಬ್ರಮಣಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ತಂಗಮ್ಮ, ವೀರಶೈವ ಸಮಾಜದ ಕಾರ್ಯದರ್ಶಿ ಶೇಖರ್,ಅಕ್ಕನ ಬಳಗದ ಅಧ್ಯಕ್ಷ ಜಲಜಶೇಖರ್,ಹಾಗೂ ಮುಂತಾದವರು ಉಪಸ್ಥಿತರಿದ್ದರು.

error: Content is protected !!