ಪ್ರಯಾಣಿಕರಿಗೆ ಆಶ್ರಯದ ಅಭಯ ನೀಡಿದ ಕನ್ನಿಕಾ ಸಹಕಾರ ಸಂಘ

ಕುಶಾಲನಗರ: ಸರ್ಕಾರಿ ಆಸ್ಪತ್ರೆ ಬಳಿಯ ಬಿಜಿಎಸ್ ವೃತ್ತದಲ್ಲಿ ಕೂಡಿಗೆ, ಸೋಮವಾರಪೇಟೆ ಹಾಗು ಹಾಸನದತ್ತ ತೆರಳುವ ಜನರು ಸಾರಿಗೆ ವಾಹನಗಳಾದ ಆಟೋ, ಖಾಸಗಿ ಬಸ್ಸು, ಸರ್ಕಾರಿ ಬಸ್ಸು ಹೀಗೆ ರಸ್ತೆಯ ಬದಿಯ ನಿಂತು ಕಾಯುತ್ತಿದ್ದ ಪ್ರಯಾಣಿಕರಿಗೆಂದು ಬಿಸಿಲು, ಮಳೆಯಿಂದ ತಪ್ಪಿಸಲು ಒಂದು ನೂತನ ತಂಗುದಾಣ ಸಿದ್ಧವಾಗಿದೆ.

ಸ್ಥಳೀಯ ಆಡಳಿತ ಇಲ್ಲಿನ ಪ್ರಯಾಣಿಕರ ಗೋಳು ಇಲ್ಲಿಯವರೆಗೆ ಕಂಡೂ ಕಾಣದಂತಿದ್ದ ಈ ಸಮಸ್ಯೆಯನ್ನು ಗುರುತಿಸಿ, ಪರಿಹರಿಸುವ ನಿಟ್ಟಿನಲ್ಲಿ ಕುಶಾಲನಗರದ ಆರ್ಯವೈಶ್ಯ ಸಮುದಾಯದ ಮಂದಿ ನಡೆಸುತ್ತಿರುವ ಕನ್ನಿಕಾ ಪರಮೇಶ್ವರಿ ಸಹಕಾರ ಸಂಘ ಮುಂದಡಿ ಇಟ್ಟಿತು.

ಈ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಆರ್.ರವಿಕುಮಾರ್ ನೇತೃತ್ವದ ಸಮಾನ ಮನಸ್ಕರ ತಂಡ ಇಲ್ಲಿ ತಂಗುದಾಣವೊಂದನ್ನು ಅಂದಾಜು ಒಂದು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು, ಸಾರ್ವಜನಿಕ ಸೇವೆಗೆ ಮುಡಿಪಾಗಿಟ್ಟಿದೆ. ಇಂತಹ ಕಾರ್ಯಗಳು ಸಂಘ ಸಂಸ್ಥೆಗಳಿಂದ ಆದಾಗ ಅದು ನಿಜಕ್ಕೂ ಪ್ರಶಂಸನಾರ್ಹ ಎಂದೇ ಹೇಳಬಹುದು…

error: Content is protected !!