fbpx

ಪ್ರಧಾನಿ ಮೋದಿ ಭೇಟಿಯಾದ ಅಂಕಿತಾ ಸುರೇಶ್

ಕೊಡಗು ಮೂಲದ ಕ್ರೀಡಾ ತಾರೆ ಅಂಕಿತ ಸುರೇಶ್ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಯೋಜಿಸಿದ್ದ ಚಹಾಕೂಟದಲ್ಲಿ ಪಾಲ್ಗೊಂಡರು.

ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾಗಿ ಗಮನಸೆಳೆದಿದ್ದ ಅಂಕಿತ ಸುರೇಶ್ ಅವರನ್ನು ತಂಡದ ಸಾಧನೆಗಾಗಿ ಪ್ರಧಾನಿ ಮೋದಿ ಶ್ಲಾಘಿಸಿದರು.

ದೇಶದ ಮಹೋನ್ನತ ನಾಯಕನನ್ನು ಭೇಟಿಯಾಗಿದ್ದು ಜೀವನದ ಅವಿಸ್ಮರಣೀಯ ಕ್ಷಣ ಎಂದು ಅಂಕಿತ ಸುರೇಶ್ ತಿಳಿಸಿದ್ದಾರೆ.

error: Content is protected !!