fbpx

ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಟ್ರಂಪ್

ವಾಷಿಂಗ್ಟನ್: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನ್ನ ಸ್ನೇಹಿತರಾಗಿದ್ದು, ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಭಾರತೀಯರು ಓರ್ವ ಶ್ರೇಷ್ಠ ನಾಯಕ ಮತ್ತು ಶ್ರೇಷ್ಠ ವ್ಯಕ್ತಿಯನ್ನು ಪಡೆದಿದ್ದೀರಿ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

2021ರ ಫೆಬ್ರವರಿ ತಿಂಗಳಿನಲ್ಲಿ ಟ್ರಂಪ್ ಅವರು ಪತ್ನಿ ಮೆಲಾನಿಯಾ ಅವರೊಂದಿಗೆ ಭಾರತಕ್ಕೆ ಭೇಟಿ ನೀಡಲಿದ್ದು, ಅದರ ಕುರಿತು ಮಾತನಾಡಿರುವ ಅವರು, ಭಾರತದಲ್ಲಿ ಸಂತೋಷವಾಗಿ ರೀತಿಯಲ್ಲಿ ಕಾಲವನ್ನು ಕಳೆದೆವು. ಅದ್ಭುತವಾದ ಜನರನ್ನು ನಾವು ಅಲ್ಲಿ ನೋಡಿದ್ದೇವೆ. ಅದೊಂದು ಅಚ್ಚರಿಯ ದೇಶವಾಗಿದ್ದು, ಖಂಡಿದವಾಗಿಯೂ ಶ್ರೇಷ್ಠವಾಗಿದೆ ಎಂದು ಹೇಳಿದ್ದಾರೆ.

ಇದೇ ಸಮಯ ಹ್ಯೂಸ್ಟನ್’ನಲ್ಲಿ ನಡೆದ ಹೌಡಿ ಮೋದಿ ಸಮಾರಂಭ ಕುರಿತು ಮಾತನಾಡಿದ ಅವರು, ನಾವು ಹ್ಯೂಸ್ಟನ್ ನಗರದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದೆವು.

ಅದು ಅದ್ಭುತವಾಗಿತ್ತು. ನಾವು ಭಾರತದಿಂದ ಮತ್ತು ಪ್ರಧಾನಿ ಮೋದಿ ಅವರಿಂದ ದೊಡ್ಡ ಮಟ್ಟದ ಬೆಂಬಲವನ್ನು ಪಡೆದುಕೊಂಡಿದ್ದೇವೆ. ಭಾರತದವರು ಟ್ರಂಪ್’ಗಾಗಿ ಮತ ಚಲಾಯಿಸುತ್ತಾರೆಂದು ಎನಿಸುತ್ತಿದೆ ಎಂದೂ ತಿಳಿಸಿದ್ದಾರೆ.

error: Content is protected !!