ಪ್ರಧಾನಿ ಮೋದಿಗೆ ಮನಮೋಹನ್ ಸಿಂಗ್ ಪತ್ರ!

ನವದೆಹಲಿ: ದೇಶದಲ್ಲಿ ಕೊರೋನಾ ಪರಿಸ್ಥಿತಿ ನಿಯಂತ್ರಕ್ಕೂ ಮೀರಿ ಹಬ್ಬುತ್ತಿದೆ. ಕಟ್ಟು ನಿಟ್ಟಿನ ನಿಯಮ, ಲಾಕ್‌ಡೌನ್, ನೈಟ್ ಕರ್ಫ್ಯೂ ಸೇರದಂತೆ ಹಲವು ನಿರ್ಬಂಧಗಳು ಜಾರಿಯಲ್ಲಿದ್ದರೂ ಕೊರೋನಾ ಸಂಖ್ಯೆ ಇಳಿಯುತ್ತಿಲ್ಲ. ಸತತ ಉನ್ಮತ ಮಟ್ಟದ ಸಭೆ ನಡೆಯತ್ತಿದೆ. ಇದರ ನಡುವೆ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಇದೀಗ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಕೊರೋನಾ ನಿಯಂತ್ರಣಕ್ಕೆ ಮಹತ್ವದ ಸಲಹೆ ನೀಡಿದ್ದಾರೆ.

ಕರ್ನಾಟಕದಲ್ಲಿ ಲಾಕ್‌ಡೌನ್ ಬದಲಿಗೆ ಮತ್ತೊಂದು ಟಫ್ ರೂಲ್ಸ್: ಏನದು?

ಕೊರೋನಾ ನಿಯಂತ್ರಣಕ್ಕೆ ದೇಶದಲ್ಲಿ ಲಸಿಕೆ ನೀಡುವಿಕೆಯನ್ನು ಹೆಚ್ಚಿಸಬೇಕು. ತ್ವರಿತಗತಿಯಲ್ಲಿ ದೇಶದ ಎಲ್ಲರಿಗೂ ಲಸಿಕೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸಬೇಕು ಎಂದು ಮನ್‌ಮೋಹನ್ ಸಿಂಗ್ ಪತ್ರದಲ್ಲಿ ಹೇಳಿದ್ದಾರೆ.

ಕೊರೋನಾ ಲಸಿಕೆ ನೀಡಿವರ ಸಂಖ್ಯೆಹೇಳವುದುನ್ನು ಅಥವಾ ಅದರತ್ತ ಗಮನಕೊಡುವುದನ್ನು ನಿಲ್ಲಿಸಬೇಕು. ಬದಲಾಗಿದೆ. ದೇಶದ ಒಟ್ಟು ಜನಸಂಖ್ಯೆ ಪೈಕಿ ಶೇಕಡಾವಾರು ಎಷ್ಟು ಮಂದಿಗೆ ಲಸಿಕೆ ನೀಡಲಾಗಿದೆ ಅನ್ನೋದರ ಕುರಿತು ಗಮನಹರಿಸಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.

92 ದಿನದಲ್ಲಿ ಭಾರತ 12 ಕೋಟಿ ಲಸಿಕೆ ನೀಡಲಾಗಿದೆ. ಆದರೆ ಒಟ್ಟು ಜನಸಂಖ್ಯೆಯಲ್ಲಿ ಲಸಿಕೆ ಪಡೆದುಕೊಂಡವರ ಶೇಕಡಾವಾರು ಪಡೆದರೆ ಇದು ಅತ್ಯಂತ ಕಡಿಮೆಯಾಗಿದೆ. ಹೀಗಾಗಿ ಭಾರತದಲ್ಲಿ ಲಸಿಕೆ ನೀಡುವಿಕೆಯನ್ನು ಹೆಚ್ಚಿಸಬೇಕು ಎಂದು ಮನ್‌ಮೋಹನ್ ಸಿಂಗ್ ಹೇಳಿದ್ದಾರೆ.

ಲಸಿಕೆ ನೀಡುವಿಕೆಯಲ್ಲಿ ಭಾರತದ ಸಾಧನೆ; 12 ಕೋಟಿ ವ್ಯಾಕ್ಸಿನ್ ವಿತರಣೆ!

ಆಯಾ ರಾಜ್ಯಗಳಿಗೆ, ಆಯಾ ಕೇಂದ್ರಾಡಳಿತ ಪ್ರದೇಶಗಳಿಗೆ ಎಷ್ಟು ಡೋಸ್ ಪೂರೈಕೆ ಮಾಡಲಾಗಿದೆ ಅನ್ನೋದನ್ನು ಬಹಿರಂಗ ಪಡಿಸಬೇಕು. ಈ ಮೂಲಕ ಲಸಿಕೆ ಅಭಾವ ಆರೋಪಗಳಿಗೆ ಸ್ಪಷ್ಟ ಉತ್ತರ ಸಿಗಲಿದೆ. ಲಸಿಕೆ ನೀಡುವಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಮನ್‌ಮೋಹನ್ ಸಿಂಗ್ ಹೇಳಿದ್ದಾರೆ.

ಕೇಂದ್ರ ಸರ್ಕಾರವು ತುರ್ತು ಅಗತ್ಯಗಳ ಆಧಾರದ ಮೇಲೆ ಶೇಕಡಾ 10 ರಷ್ಟು ಲಸಿಕೆಯನ್ನು ಉಳಿಸಿಕೊಂಡು ಉಳಿದ ಲಸಿಕೆಗಳ ವಿತರಣೆಯನ್ನು ತ್ವರಿತಗತಿಯಲ್ಲಿ ಮಾಡಬೇಕು.ಆಯಾ ರಾಜ್ಯಕ್ಕೆ ಎಷ್ಟೆಷ್ಟು ಲಸಿಕೆ ಅನ್ನೋ ಕುರಿತು ಪಾರದರ್ಶಕತೆ ಬೇಕು . ಇದರಿಂದ ರಾಜ್ಯಗಳು ಡೋಸ್ ತಕ್ಕಂತೆ ಲಸಿಕಾ ಕೇಂದ್ರಗಳ ವಿಸ್ತರಣೆ, ಲಸಿಕಾ ಅಭಿಯಾನಗಳ ಮೂಲಕ ಹೆಚ್ಚಿನವರಿಗೆ ಲಸಿಕೆ ನೀಡಲು ಸಾಧ್ಯವಾಗಲಿದೆ ಎಂದಿದ್ದಾರೆ.

ಲಸಿಕಾ ಉತ್ಪಾದಕರಿಗೆ ಅಗತ್ಯ ಮೂಲಸೌಕರ್ಯ ನೀಡಬೇಕು. ಉತ್ಪಾದಕತೆಯನ್ನು ಹೆಚ್ಚಿಸಲು ಎಲ್ಲಾ ನೆರವು ನೀಡಬೇಕು. ಅರ್ಹ ಕಂಪನಿಗಳ ಲಸಿಕೆಗಳಿಗೆ ಅನುಮೋದನೆ, ಉತ್ಪಾದನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನ್‌ಮೋಹನ್ ಸಿಂಗ್ ಸಲಹೆ ನೀಡಿದ್ದಾರೆ.

error: Content is protected !!