ಪ್ರಧಾನಿ ಭದ್ರತಾ ಲೋಪ ಪ್ರಕರಣ; ಪೊಲೀಸರಿಗೆ ಸನ್ಮಾನ

ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನ ಜಲಂಧರ್ ಗೆ ಭೇಟಿ ನೀಡಿದ ವೇಳೆ ಫಿರೋಜ್ ಪುರದ ಫ್ಲೈಓವರ್ ಮೇಲೆ ನಡೆದ ಭದ್ರತಾ ಲೋಪ ಘಟನೆ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿತ್ತು.
ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಕರ್ತವ್ಯ ನಿರ್ವಹಿಸಿದ್ದ 14 ಮಂದಿ ಪೊಲೀಸರನ್ನು ಪುರಸ್ಕಾರ ನೀಡಿ ಗೌರವಿಸಿದೆ.
ಭದ್ರತಾ ಲೋಪ ಘಟನೆಯಿಂದಾಗಿ ಆಗಿನ ಸಿ.ಎಂ ಆಗಿದ್ದ ಚನ್ನಿ ಹಾಗೂ ಪಂಜಾಬ್ ಪೊಲೀಸರ ಮೇಲೆ ಆರೋಪಗಳು ಕೇಳಿಬಂದಿದ್ದವು. ಭದ್ರತಾ ಲೋಪ ಘಟಿಸಿದ ಸಂದರ್ಭದಲ್ಲಿ ಕರ್ತವ್ಯನಿಷ್ಠೆ ಮೆರೆದಿದ್ದ 14 ಮಂದಿ ದಕ್ಷ ಪೊಲೀಸ್ ಅಧಿಕಾರಿಗಳನ್ನು ಪುರಸ್ಕರಿಸುವ ಆದೇಶವನ್ನು ಡಿಜಿಪಿ ಹೊರಡಿಸಿದ್ದರು.