ಪ್ರಧಾನಿ ನಿರ್ದೇಶನಕ್ಕೆ ಕಾಯುತ್ತಿದ್ದೇನೆ: ಸಿ.ಎಂ ಯಡಿಯೂರಪ್ಪ

ಬೆಂಗಳೂರು : ಕೊರೊನಾ ನಿಯಂತ್ರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಏನು‌ ಮಾತಾಡುತ್ತಾರೆ ನಿರ್ದೇಶನ ಕೊಡುತ್ತಾರೆ ಎಂದು ಕಾಯುತ್ತಾ ಇದ್ದೇವೆ.ಅವರು ಏನು ನಿರ್ದೇಶನ ಕೊಡುತ್ತಾರೋ ಅದರಂತೆ ನಡೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಮಾನದಂತೆ ಪ್ರಧಾನಿ ತೆಗೆದುಕೊಳ್ಳುವ ನಿರ್ಧಾರದಂತೆ ನಾವು ನಮ್ಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಕೊರೊನಾ ಹೆಚ್ಚುತ್ರುವ ಸಮಯದಲ್ಲಿ ಪ್ರಧಾನಿ ಅವರ ಸಭೆ ಮಹತ್ವದ್ದಾಗಿದೆ. ಪ್ರಧಾನಿ ಮೋದಿ ಅವರ ನಿರ್ದೇಶನವನ್ನ ನಾವು ಪಾಲಿಸುತ್ತೇವೆ. ಅವರ ನಿದೇಶ9ನವನ್ನು ನಾವು ಕಾಯುತ್ತಿದ್ದೇವೆ ಎಂದರು.

ಕೇಂದ್ರ ಸರ್ಕಾರದ ನಿರ್ಧಾರಗಳನ್ನು ರಾಜ್ಯಗಳು ಪಾಲಿಸಬೇಕಾಗುತ್ತೆ ಎಂದು ಸಿ.ಎಂ ಸಮರ್ಥಿಸಿಕೊಂಡರು.

error: Content is protected !!