ಪ್ರತಿಭಾ ಕಾರಂಜಿ ಹಾಗು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ


ಕುಶಾಲನಗರ ಎ ವಲಯ ಮಟ್ಟದ ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿ ಸ್ಪರ್ಧೆ ಹಾಗೂ ತಾಲ್ಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಸರಕಾರಿ ಪ್ರೌಢಶಾಲೆ ತೊರೆನೂರು ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕ ಬಿ ಆರ್ ಸತ್ಯಾರಾಯಣ ಅವರು ಪ್ರಶಸ್ತಿ ವಿತರಿಸಿದರು.
ಪಠ್ಯದ ಜೊತೆಗೆ ಪಠ್ಯತೇರ ಚಟುವಟಿಕೆಗಳು ವಿದ್ಯಾರ್ಥಿಗಳ ಕಲೆಯನ್ನು ಹೊರ ಹಾಕಲು ಉತ್ತಮ ಅವಕಾಶ ಎಂದರು. ಈ ಸಂದರ್ಭ ಶಾಲೆಯ ಶಿಕ್ಷಕರಾದ ಶ್ರೀಮತಿ ಸವಿತಾ ಬೀ ಪಿ,ಜಯಲಕ್ಷ್ಮಿ ಎಂ ಎಸ್,ಶೈಲಾ, ಶ್ರೀ ಹರ್ಷ ಜಿ,ಮಂಜುನಾಥ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.