ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ಬಿಟ್ಟಂಗಾಲ ಆರ್ ಕೆ ಎಫ್ ನಲ್ಲಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಇಂದು ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಎ.ಕೆ.ಸುಬ್ಬಯ್ಯ ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ಮತ್ತು ಶಕ್ತಿ ದಿನಪತ್ರಿಕೆ ಸಹಯೋಗದಲ್ಲಿ ಸುಮಾರು 46 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ತಲಾ ರೂ.10000 ನಗದು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಎಂ.ಸಿ.ನಾಣಯ್ಯ, ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ನಾಟ್ಯ ಕಲಾವಿದೆ ಯಾಮಿನಿ ಮುತ್ತಣ್ಣ,ಶಕ್ತಿ ಸಂಪಾದಕ ಜಿ.ಚಿದ್ವಿಲಾಸ್, ರಾಜ್ಯ ಹೈಕೋರ್ಟ್ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ, ಎ.ಎಸ್.ನರೇನ್ ಕಾರ್ಯಪ್ಪ ಮುಂತಾದವರು ಉಪಸ್ಥಿತರಿದ್ದರು.
ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದವರು.
ಮಡಿಕೇರಿ ಲಕ್ಷ್ಮಿ ಪ್ರಸಾದ್ ದಂಪತಿ ಪುತ್ರಿ ಮೌನ ಪಿ.ಎಲ್ ಶೇ.99.5 ಅಂಕ, ಸೋಮವಾರಪೇಟೆ ಯ ಅಶಿತಾ ಎಂ.ಎನ್.ಶೇ.99.5, ಬೇತ್ರಿ ಸಮೀಪ ಕಿಗ್ಗಾಲುವಿನ ತೀರ್ಥ ತಂಗಮ್ಮ ಶೇ.99.5 ಹಾಗೂ ತೀವ್ರ ಬಡತನದಲ್ಲಿರುವ ಮರಗೋಡುವಿನ ಹನಿಶ್ರೀ ಎಂ.ಎನ್.ಶೇ.54.16 ಅಂಕಗಳಿಸಿದ ವಿದ್ಯಾರ್ಥಿನಿಗೂ ಇಂದು ತಲಾ ರೂ.10 ಸಾವಿರ‌ ವಿತರಿಸಲಾಯಿತು.ಸುಮಾರು 100ಕ್ಕೂ ಅಧಿಕ ಅರ್ಜಿಗಳಲ್ಲಿ ಒಟ್ಟು 45 ವಿದ್ಯಾರ್ಥಿ ನಿಯರನ್ನು ಆಯ್ಕೆ ಮಾಡಲಾಗಿದೆ.

error: Content is protected !!