fbpx

ಪ್ರಜ್ಞಾ ಚೌತಾಳ ಸಾಕಾನೆಗಳಿಂದ ಮತ್ತೆ ದಾಂಧಲೆ

ದುಬಾರೆ ಅರಣ್ಯ ವ್ಯಾಪ್ತಿ ಬಳಿ ಖಾಸಗಿಯಾಗಿ ಸಾಕಾನೆಗಳನ್ನು ಸಾಕುತ್ತಿದ್ದ ಪ್ರಜ್ಞಾ ಚೌತಾರಿಗೆ ಸೇರಿದ ಆನೆಗಳು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ಮತ್ತೆ ಅವಾಂತರ ಸೃಷ್ಟಿಸಿದೆ.

ಇಲ್ಲಿನ ಮೈಲಕಂಡ್ರ ಡಿಂಪಲ್ ಎಂಬುವವರಿಗೆ ಸೇರಿದ ಭತ್ತ, ಬಾಳೆ, ಅಡಿಕೆ ಮತ್ತು ಹಣ್ಣಿನ ತೋಟಗಳಿಗೆ ಲಗ್ಗೆ ಇಟ್ಟಿದಲ್ಲದೆ ಸುತ್ತಮುತ್ತಲಿನ ಕಟಾವಿಗೆ ಬಂದಿದ್ದ ಭತ್ತದ ಗದ್ದೆಯಲ್ಲಿ ಅಡ್ಡಾಡಿ ಫಸಲು ನಾಶಗೊಳಿಸಿದ್ದು ಸ್ಥಳೀಯರ ಆಕ್ರೋಶ ಕ್ಕೆ ಮತ್ತೆ ಕಾರಣವಾಗಿದೆ.

ಅರಣ್ಯ ಇಲಾಖೆ ನಿರ್ದೇಶನದಂತೆ ಆನೆಗಳನ್ನು ಬಂಡೀಪುರ ಮತ್ತು ಚಾಮರಾಜನಗರ ಭಾಗದ ಮತ್ತೊಂದು ಪ್ರದೇಶಕ್ಕೆ ಸ್ಥಳ ಗುರುತಿಸಿ ವರ್ಗಾಸುವಂತೆ ಸೂಚಿಸಲಾಗಿದ್ದರೂ ಕಾನೂನಿಗೆ ಕಿಮ್ಮತ್ತು ಬೆಲೆ ಕೊಡದೆ ಒಂದಲ್ಲಾ ಒಂದು ಕಾರಣ ತೆಗೆದು ಅರಣ್ಯ ಇಲಾಖೆಯ ವಿರುದ್ದ ತಿರುಗಿಸುತ್ತದೆ,ತಾನು ಸುತ್ತಮುತ್ತಲಿನ ಖಾಸಗಿ ಆನೆಗಳನ್ನು ತನ್ನ ವ್ಯಾಪ್ತಿಯಲ್ಲೇ ಇಟ್ಟುಕೊಂಡು ಸ್ಥಳೀಯರ ರೈತರಿಗೆ ತೊಂದರೆ ನೀಡುತ್ತಿದ್ದಾರೆ,ಈ ಬಗ್ಗೆ ಅರಣ್ಯ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದಕ್ಕೆ ಸಾಕಷ್ಟು ಅನುಮಾನ ಈಡುಮಾಡಿಕೊಟ್ಟಿದ್ದು, ಯಾವುದೇ ಕ್ಷಣದಲ್ಲಿ ಅರಣ್ಯ ಇಲಾಖೆ ವಿರುದ್ದ ಸ್ಥಳೀಯರು ತಿರುಗಿ ಬೀಳುವ ಸಾಧ್ಯತೆಯಿದೆ.

error: Content is protected !!