ಪ್ರಕೃತಿ ವಿಕೋಪ ತಜ್ಞರ ವಿರುದ್ದ ಕೆ.ಜಿ ಬೋಪಯ್ಯ ಅಸಮಧಾನ

ಕೊಡಗು: ಹವಾನಿಯಂತ್ರಣ ಕೊಠಡಿಯಲ್ಲಿ ಕುಳಿತು,ಕೊಡಗಿನ ಪ್ರಕೃತಿ ವಿಕೋಪದ ನಷ್ಟದ ಬಗ್ಗೆ ಅವಲೋಕಿಸುವ ಪ್ರಕೃತಿ ವಿಕೋಪ ತಜ್ಞರು ಕೊಡಗಿನ ನೈಜ ಪರಿಸ್ಥಿತಿ ಅರ್ಥ ಮಾಡಿಕೊಳ್ಳದಿರುವ ಪರಿಣಾಮ ಸಾಕಷ್ಟು ಮಂದಿಗೆ ಅನ್ಯಾಯವಾಗಿದೆ ಎಂದು ಮಾಜಿ ಸ್ಪೀಕರ್ ಹಾಲಿ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಕಿಡಿಕಾರಿದ್ದಾರೆ. ಕೊಡಗಿನಲ್ಲಿ ಸಮರ್ಪಕ ಅಧ್ಯಾಯನ ನಡೆದಿಲ್ಲ,ನಾಮಕಾವಸ್ತೆಗೆ ಸ್ಥಳ ಪರಿಶೀಲನೆ ನಡೆಸಿ ವರದಿ ತಯಾರಿಸಿದ್ದು ಇದನ್ನು ತಿರಸ್ಕರಿಸುವುದು ಸೂಕ್ತ ಎಂದು ಕಾಲೂರು ಗ್ರಾಮದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಸ್ಥಳೀಯರ ಅಭಿಪ್ರಾಯ ಸಂಗ್ರಹಿಸದೆ ಭೋಗರ್ಭ ತಜ್ಞರು ಸಿದ್ದಪಡಿಸಿರುವ ವರದಿ ಅವೈಜ್ನಾನಿಕ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ‌.

error: Content is protected !!