ಪ್ರಕರಣದ ಪ್ರಮುಖ ಆರೋಪಿ ಜೊತೆ ಹಿರಿಯ ಪೊಲೀಸ್ ಮೇಲಾಧಿಕಾರಿ ನಂಟು…!?

ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಈ ಚಿನ್ನದ ಕಳವು ಪ್ರಕರಣ!
4.5 ಕೆಜಿ ಚಿನ್ನಕ್ಕೆ ಕಣ್ಣ ಹಾಕಿತಾ ಖಾಕಿ…?!
ಬೆಳಗಾವಿ : ಕಳ್ಳರನ್ನು ಹೆಡೆಮುರಿ ಕಟ್ಟಿ ವ್ಯವಸ್ಥೆಯನ್ನು ಸರಿ ದಾರಿಗೆ ತರಬೇಕಿದ್ದ ಪೊಲೀಸರ ಮೇಲೆಯೇ ಸಧ್ಯ 4.5 ಕೆಜಿ ಚಿನ್ನ ಕಳ್ಳತ ಮಾಡಿದ ಆರೋಪ ಕೇಳಿಬಂದಿದೆ. ಜಪ್ತಿ ಮಾಡಲಾಗಿದ್ದ ಸುಮಾರು 2 ಕೋಟಿ ರೂ. ಮೌಲ್ಯದ ಚಿನ್ನವನ್ನು ಪೊಲೀಸರೆ ಕಳವು ಮಾಡಿದ ಅನುಮಾನ ಮೂಡಿದ್ದು ಇದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡ ಇದೆ ಎಂಬ ಅನುಮಾನ ಮೂಡಿದೆ.

ನಿಖರ ಮಾಹಿತಿ ಮೇರೆಗೆ ಕಳೆದ ಜ. 9 ರಂದು ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರು ಜಪ್ತಿ ಮಾಡಿ, ಪೊಲೀಸ್ ಆವರಣದಲ್ಲಿ ನಿಲ್ಲಿಸಲಾಗಿತ್ತು. ಆದರೆ ತದನಂತರ ಕಾರಿನಲ್ಲಿದ್ದು ಸುಮಾರು 4.5 ಕೆಜಿ ಚಿನ್ನವನ್ನು ಕಳವು ಮಾಡಲಾಗಿದೆ ಎಂಬ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಎಲ್ಲಾ ಬೆಳವಣಿಗೆ ನಂತರ ಪ್ರಕರಣ ಮತ್ತೊಂದು ಸ್ವರೂಪ ಪಡೆದಿದ್ದು ಹಿರಿಯ ಪೊಲೀಸ್ ಅಧಿಕಾರಿಗಳೇ ಈ ಚಿನ್ನ ಕಳ್ಳತನದ ಮೂಲ ಆಗಿದ್ದರಾ ಎಂಬ ಅನುಮಾನ ದಟ್ಟವಾಗಿದೆ.

ಏನಿದು ಪ್ರಕರಣ? : ಕಳೆದ ಜನವರಿ 9 ರಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಅವರು ಯಮಕನಮರಡಿ ಠಾಣೆ ಪಿಎಸ್ ಐ ರಮೇಶ್ ಪಾಟೀಲ್ ತಂಡಕ್ಕೆ ಸೂಚನೆ ನೀಡಿದ್ದರು. ಮಂಗಳೂರು ಮೂಲದ ತಿಲಕ್ ಪೂಜಾರಿ ಎಂಬುವರಿಗೆ ಸೇದಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡು ಠಾಣೆಗೆ ಒದ್ದಿದ್ದರು. ಆದರೆ ಪಿ ಎಸ್ ಐ ಗೆ ಈ ಕಾರಿನಲ್ಲಿ ಚಿನ್ನ ಇರುವುದು ಗಮನಕ್ಕೆ ಬಂದಿಲ್ಲ.
ನಂತರ ಕಾರಿನ ಮಾಲಿಕ ತಿಲಕ್ ತನ್ನ ಸ್ನೇಹಿತನಾದ ಹುಬ್ಬಳ್ಳಿ ಮೂಲದ ಕಿರಣ್ ವೀರಣಗೌಡರ್ ಎಂಬುವವರಿಗೆ ಕಾರು ಬಿಡಿಸಿಕೊಡುವಂತೆ ಕೇಳಿಕೊಂಡಿದ್ದಾನೆ. ಆದರೆ ಕಾರು ಬಿಡಿಸಲು 60 ಲಕ್ಷ ಡಿಲ್ ಮುಂದಿಟ್ಟಿದ್ದ ಕಿರಣ್ ನಂತರ 30 ಲಕ್ಷಕ್ಕೆ ಡೀಲ್ ಮುಗಿಸಿಕೊಂಡು ಮುಂಗಡವಾಗಿ 25 ಲಕ್ಷ ಪಡೆದುಕೊಂಡಿದ್ದಾನೆ. ಆದರೆ ಈ ಪ್ರಕರಣ ತಿರುವು ಪಡೆದಿದ್ದೇ ಇದೆ ಸಂದರ್ಭದಲ್ಲಿ. ಡೀಲ್ ಪಡೆದ ಕಿರಣ್ ಎಂಬಾತ ಅಕ್ರಮ ಚಿನ್ನ ಇದ್ದ ಕಾರು ಬಿಡುವಂತೆ ಬೆಳಗಾವಿ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಕೇಳಿಕೊಂಡಿದ್ದಾನೆ. ಆದರೆ ಪ್ರಕರಣ ಕೋರ್ಟ್ನಲ್ಲಿದ್ದು ಅಲ್ಲಿಯೇ ಬಿಡಿಸಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಇಷ್ಟೊತ್ತಿಗಾಗಲೇ ಮಧ್ಯವರ್ತಿ ಕಿರಣ್ ಯಮಕನಮರಡಿ ಪೊಲೀಸ್ ಠಾಣೆಯ ಆವರಣದಲ್ಲಿದ್ದ ಕಾರಿನ ಗ್ಲಾಸ್ ಒಡೆದು ಸಿನಿಮೀಯ ರೀತಿಯಲ್ಲಿ ಸುಮಾರು 2.5 ಕೋಟಿ ಮೌಲ್ಯದ 4 ಕೆಜಿ 900 ಗ್ರಾಮ ಚಿನ್ನ ಎಗರಿಸಿದ್ದಾನೆ. ನಂತರ ಆ ಚಿನ್ನವನ್ನು ಹುಬ್ಬಳ್ಳಿಯ ಚಿನ್ನದ ವ್ಯಾಪಾರಿಗೆ ಮಾರಿ ಹಣ ಪಡೆದಿದ್ದಾನೆ. ಈ ಘಟನೆ ನಂತರ 2021 ರ ಏ.16 ರಂದು ಕಾರು ಮಾಲೀಕ ತಿಲಕ್ ಪೂಜಾರಿ ಕೋರ್ಟ್ ಗೆ ದಂಡ ತುಂಬಿ ಕಾರು ಬಿಡಿಸಿಕೊಂಡು ಗಮನಿಸಿದಾಗ ಚಿನ್ನ ಕಳುವಾಗಿರುವುದು ಗೊತ್ತಾಗಿದ್ದು ಕೂಡಲೇ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಅವರಿಗೆ ದೂರು ನೀಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ಕೂಡಲೇ ಕಾರ್ಯಪ್ರವರ್ತರಾದ ಐಜಿಪಿ ರಾಘವೇಂದ್ರ ಸುಹಾಸ್ ಹಿರಿಯ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಪತ್ರ ಬರೆದಿದ್ದಾರೆ. ಈ ಪ್ರಕರಣ ಕುರಿತು ತನಿಖೆ ನಡೆಸಿದ್ದ ಬೆಳಗಾವಿ ಎಸ್ ಸ್ಪಿ ಲಕ್ಷ್ಮಣ ನಿಂಬರಗಿ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದರು. ಆದರೆ ಈ ಪ್ರಕರಣದ ಹಿಂದೆ ಪ್ರಕರಣ ಪ್ರಮುಖ ಆರೋಪಿ ಕಿರಣ್ ವೀರಣಗೌಡರ್. ಗೋಕಾಕ್ ಡಿವೈ ಎಸ್ ಪಿ ಜಾವೇದ್. ಪಿಎಸ್ ಐ ರಮೇಶ್ ಪಾಟೀಲ್ ಸೇರಿದಂತೆ ಇನ್ನೂ ಕೆಲವು ಅಧಿಕಾರಿಗಳ ಕೈವಾಡ ಇರುವುದಾಗಿ ಶಂಕೆ ವ್ಯಕ್ತವಾಗಿದೆ.
ರಾತ್ರೋರಾತ್ರಿ ಹಲವು ಅಧಿಕಾರಿಗಳ ವರ್ಗಾವಣೆ : ಯಾವಾಗ ಈ ಪ್ರಕರಣ ಗೃಹ ಸಚಿವರ ಗಮನಕ್ಕೆ ಬಂದ ಕೂಡಲೇ ಗೋಕಾಕ್ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಡಿ ವೈ ಎಸ್ ಪಿ ಜಾಬೇದ್ ಇನಾಮದಾರ, ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ, ಪಿಎಸ್ ಐ ರಮೇಶ್ ಪಾಟೀಲ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಪ್ರಕರಣವನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ಕಳ್ಳತನ ಆರೋಪದಲ್ಲಿ ಪೊಲೀಸರು ಇರುವ ಅನುಮಾನ ಬಂದ ಹಿನ್ನಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
ಪ್ರಕರಣ ತನಿಖೆ ಸಿಐಡಿ ಹೆಗಲಿಗೆ : ಪೊಲೀಸರ ಮೇಲೆಯೇ ಕಳ್ಳತನ ಆರೋಪದ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ವರದಿ ಮೇರೆಗೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ. ಈಗಾಗಲೇ ಸಿಐಡಿ ಅಧಿಕಾರಿಗಳು ಪಿಎಸ್ ಐ ರಮೇಶ್ ಪಾಟೀಲ್ ಸೇರಿದಂತೆ ಸಂಬಂಧಿಸಿದ ಕೆಲವು ಅಧಿಕಾರಿಗಳ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಸಿಐಡಿ ಪಡೆದುಕೊಂಡಿರುವ ಮಾಹಿತಿಯನ್ನು ಡಿಜಿಪಿಗೆ ಒಪ್ಪಿಸಲಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಜಿತೆ ಐಜಿಪಿ ಪೋಟೋ ವೈರಲ್ : ಚಿನ್ನ ಕಳವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಹುಬ್ಬಳ್ಳಿ ಮೂಲದ ಕಿರಣ್ ವೀರಣಗೌಡರ್ ಜೊತೆ ಉತ್ತರ ವಲಯ ಐಜಿಪಿಯಾಗಿದ್ದ ರಾಘವೇಂದ್ರ ಸುಹಾಸ್ ಅವರ ಪೋಟೋ ವೈರಲ್ ಆಗಿವೆ. ಐಜಿಪಿ ಯವರಿಗೆ ಈ ಹಿಂದೆ ಕರಿಣ್ ಪರಿಚಯದವನಾಗಿದ್ದ ಜಿತೆಗೆ ಕಾರು ಬಿಡಿಸಿಕೊಡುವಂತೆ ಯಮಕನಮರಡಿ ಪಿ ಎಸ್ ಐ ರಮೇಶ್ ಪಾಟೀಲ್ ಮೇಲೆ ಒತ್ತಡ ಹೇರಿದ್ದ ಎಂಬ ಅನುಮಾನ ಮೂಡುತ್ತಿದೆ. ಇದರ ಬೆನ್ನಲ್ಲೇ ಶುಕ್ರವಾರ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಅವರ ವರ್ಗಾವಣೆಯಾಗಿದ್ದು ಕೂಡಾ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.