ಪೋಲಿಸ್ ಕಾನ್ಸ್ಟೇಬಲ್ ಅಂದರ್

ಇಲಾಖೆಯ ಸಮವಸ್ತ್ರ ಹಾಕಿಕೊಂಡು ದಿನನಿತ್ಯ ಶಾಲಾ ಬಾಲಾಕಿಯರನ್ನು ಹಿಂಬಾಲಿಸುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬ ಗ್ರಾಮಸ್ಥರ ಅತಿಥಿಯಾಗಿ, ಪೊಲೀಸರ ವಶಕ್ಕೆ ಒಳಗಾದ ಘಟನೆ ವಿರಾಜಪೇಟೆಯ ಒಂಟಿಯಂಗಡಿಯಲ್ಲಿ ನಡೆದಿದೆ.
ಅಮ್ಮತ್ತಿ ಉಪಠಾಣೆಯ ಚಂದ್ರಶೇಖರ್ ಎಂಬಾತ ಗ್ರಾಮಸ್ಥರಿಂದ ದಿಗ್ಬಂಧನಕ್ಕೆ ಒಳಗಾದ ಪೇದೆ. ಶಾಲಾ ಬಾಲಕಿಯರನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಆರೋಪದ ಹಿನ್ನಲೆ ಸಾರ್ವಜನಿಕರು ಕಾನ್ಸ್ಟೇಬಲ್ ನನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ.
ಈತ ಮೂರು ದಿನಗಳಿಂದ ಶಾಲಾ ಬಾಲಕೀಯರನ್ನು ಹಿಂಬಾಲಿಸುತ್ತಿದ್ದ, ಕೈ ಸನ್ನೆ ಮಾಡುವುದು,ಅಸಭ್ಯವಾಗಿ ವರ್ತಿಸುವುದು ಬಗ್ಗೆ ಬಾಲಕೀಯರು ಪೋಷಕರ ಬಳಿ ಅಳಲು ತೋಡಿಕೊಂಡಿದ್ದಾರೆ, ಈ ಬಗ್ಗೆ ಸಂಚು ರೂಪಿಸಿದ್ದ ಪೋಷಕರು ಆಟೋದಲ್ಲಿ ಹಿಂಬಾಲಿಸುತ್ತಿದ್ದ ಕಾನ್ಸ್ಟೇಬಲ್ ನನ್ನು ವಶಕ್ಕೆ ಪಡೆದಿದ್ದಾರೆ .