fbpx

ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನದಲ್ಲಿ ಗಾಂಜಾ ಬೆಳೆ ಸಹಿತ ಆರೋಪಿ ಬಂಧನ

ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಣಗೇರಿ ಗ್ರಾಮದ ಎಂ.ಪೊನ್ನಣ್ಣ ಅವರ ಕಾಫಿ ತೋಟದಲ್ಲಿ ಅಕ್ರಮವಾಗಿ ಬೆಳೆದಿದ್ದ ಸುಮಾರು ಒಂದು ಕೆ.ಜಿ.ಗಾಂಜಾ ಗಿಡಗಳನ್ನು ಬೆಳೆದಿದ್ದು, ಆರೋಪಿ ಪೊನ್ನಣ್ಣ ನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಅಧೀಕ್ಷಕ ಕ್ಯಾ.ಮಲಚೀರ ಎ.ಅಯ್ಯಪ್ಪ ಅವರ ನಿರ್ದೇಶನದಂತೆ ವಿರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ನಿರಂಜನ್ ರಾಜೇ ಅರಸ್ ಅವರ ಮಾರ್ಗದರ್ಶನದಲ್ಲಿ ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ ನೇತೃತ್ವದಲ್ಲಿ ಶ್ರೀಮಂಗಲ ಠಾಣಾಧಿಕಾರಿ ರವಿಶಂಕರ್ ಅವರು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮಾದಕ ವಸ್ತು ಸೇವನೆ,ಸರಬರಾಜು ನಿಂದ ಯುವ ಜನಾಂಗ ಹಾದಿ ತಪ್ಪಿ ಬದುಕೇ ಹಾಳುಮಾಡಿಕೊಳ್ಳುತ್ತಿದ್ದು ಮಾದಕ ವಸ್ತು ಪತ್ತೆ ಹಚ್ಚಿ ಅದರ ವಿರುದ್ಧ ನೂತನ ಎಸ್ಟಿ ಅಯ್ಯಪ್ಪ ಅವರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಿದ ಬೆನ್ನಲ್ಲೇ ಸರಣಿ ರೂಪದಲ್ಲಿ ಅಕ್ರಮ ಗಾಂಜಾ ಪ್ರಕರಣದ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಯಿತು.

error: Content is protected !!