ಪೊಲೀಸ್ ಭದ್ರತೆ ವೈಫಲ್ಯ ನಡೆದಿಲ್ಲ: ಕೆ.ಜಿ ಬೋಪಯ್ಯ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಆಗಮಿಸಿದ್ದ ವೇಳೆ ಪೊಲೀಸರಿಂದ ಯಾವುದೇ ಲೋಪದೋಷಗಳು ನಡೆದಿಲ್ಲ,ಯಾವುದೇ ಭದ್ರತೆ ವೈಫಲ್ಯವಾಗಿಲ್ಲ ಎಂದು ಶಾಸಕ ಕೆ.ಜಿ ಬೋಪಯ್ಯ ಸಮರ್ಥಿಸಿಕೊಂಡರು.
ಮಡಿಕೇರಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯರ ಸರ್ವಾಧಿಕಾರಿ ಧೋರಣೆ ಸರಿಯಿಲ್ಲ ಪೊಲೀಸರಿಗೆ ಧಮ್ಕಿ ಹಾಕುವುದನ್ನು ಮೊದಲು ಬಿಡಬೇಕು, ಆಗಸ್ಟ್ 26 ರಂದು ಎಸ್ಪಿ ಕಚೇರಿ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಸವಾಲಾಗಿ ಸ್ವೀಕರಿಸುತ್ತೇವೆ’ ಎಂದರು.