ಪೊಲೀಸ್ ಅಧಿಕಾರಿಗಳಿಂದ ಸಾರ್ವಜನಿಕರೊಂದಿಗೆ ಸಭೆ

ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವಲಸಿಗರಿಂದ ಆಗುತ್ತಿರುವ ಹೆಚ್ಚಿನ ಅಪರಾಧ ಪ್ರಕರಣಗಳ ಸಂಬಂಧ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಭೆ ನಡೆಯಿತು.
ಬಾಂಗ್ಲಾದೇಶದಿಂದ ಅಕ್ರಮ ನುಸುಳುಕೋರರು ರಾಜ್ಯದಲ್ಲಿ ಬೀಡು ಬಿಟ್ಟಿರುವ ಹಲವು ಉದಾಹರಣೆ ಸಿಕ್ಕಿದ್ದು, ಅಂತಹವರ ಮೇಲೆ ನಿಗಾ ವಹಿಸುವ ಸಂಬಂಧ ಜಿಲ್ಲೆಯ ಬೆಳೆಗಾರರ ಒಕ್ಕೂಟ, ಹೊಟೇಲ್, ಬಾರ್, ರೆಸಾರ್ಟ್,ಹೋಂ ಸ್ಟೇ, ಕಟ್ಟದ ನಿರ್ಮಾಣ ಕಾರ್ಮಿಕರು, ಗುತ್ತಿಗೆದಾರರ, ವಾಣಿಜ್ಯೋದ್ಯಮಿಗಳ ಸಂಘ, ಕಾರ್ಮಿಕ ಇಲಾಖೆ, ಸಾರಿಗೆ ನಿಗಮ, ಐ.ಬಿ, ಗುಪ್ತಚಾರ, ಡಿವೈಎಸ್ಪಿ, ಡಿಸಿಐಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ ಸಲಹೆ ಸೂಚನೆಗಳನ್ನು ಎಸ್ಪಿ ಕ್ಯಾಪ್ಟನ್ ಎಂ.ಎ ಅಯ್ಯಪ್ಪ ನೀಡಿದರು.