ಪೊನ್ನಂಪೇಟೆಯಲ್ಲಿ ಹುಚ್ಚು ನಾಯಿಯ ಹಾವಳಿ‌| ಜನರಲ್ಲಿ ಭಯ, ಆತಂಕ

ಪೊನ್ನಂಪೇಟೆಯಲ್ಲಿ ಹುಚ್ಚು ಹಿಡಿದಿರುವ ಕಪ್ಪು ಬಣ್ಣದ ನಾಯೊಂದು ಓಡಾಡುತ್ತಿದ್ದು. ಇಂದು ಕೆಲವರಿಗೆ ಆ ನಾಯಿಯು ದಾಳಿ ಮಾಡಿ ಕಚ್ಚಿರುತ್ತದೆ. ಎರಡು ಮೂರು‌ ಜನರು ನಾಯಿ‌ಕಡಿತದಿಂದಾಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿರುವ ಘಟನೆ ನಡೆದಿರುತ್ತದೆ.

ಹಾಗೆಯೇ ಆ ನಾಯಿ ಇತರೆ ನಾಯಿಗಳ ಮೇಲೂ ದಾಳಿ ನಡೆಸುತ್ತಿದೆ. ಸುದ್ದಿ ತಿಳಿದ ಪೊನ್ನಂಪೇಟೆ ಪಂಚಾಯತ್ ಸಿಬ್ಬಂದಿಗಳು ಹುಡುಕಿಕೊಂಡು ಹೋದಾಗ, ಅದು ಕುಂದಾರಸ್ತೆಯಲ್ಲಿ ತಪ್ಪಿಸಿಕೊಂಡಿದೆ‌. ಭಾಗದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಈ ಮೂಲಕ ಸಾರ್ವಜನಿಕರಲ್ಲಿ ಪಂಚಾಯತಿ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.

error: Content is protected !!