fbpx

ಪೊಂಬೊಳ್ಚ ಕೊಡವ ಕೂಟ ಅಸ್ಥಿತ್ವಕ್ಕೆ

ವಾಟ್ಸಾಪ್ ಕೂಟಕ್ಕೆ ಸಂಘಟನೆಯ ರೂಪು ಅಧ್ಯಕ್ಷರಾಗಿ ಕೋ.ಪೂ…

ಕಳೆದ ಹತ್ತು ತಿಂಗಳಿಂದ ವಾಟ್ಸಾಪ್ ಸಾಮಾಜಿಕ ಜಾಲ ಮಾದ್ಯಮದಲ್ಲಿ ತನ್ನದೆಯಾದ ರೀತಿಯಲ್ಲಿ ಕೊಡವ ಆಚಾರ, ವಿಚಾರ, ಪದ್ದತಿ, ಸಂಸ್ಕೃತಿಯ ಬೆಳವಣಿಗೆಗೆ ಒತ್ತುಕೊಡುತಿದ್ದ ” ಪೊಂಬೊಳ್ಚ ಕೊಡವ ಕೂಟ” ಇದೀಗ ಕೊಡವ ಸಂಘಟನೆಯಾಗಿ ಪರಿವರ್ತನೆ ಆಗಿದೆ.

ಇತ್ತೀಚೆಗೆ ಕಾಕೋಟುಪರಂಬು ಶ್ರೀ ಕಾಲಭೈರವ ಕಾಕೋಟೀಶ್ವರ ದೇವರ ಸನ್ನಿದಿಯಲ್ಲಿ, “ಪೊಂಬೊಳ್ಚ ಕೊಡವ ಕೂಟ” ಕ್ಕೆ ಸಂಘಟನೆಯ ರೂಪುಕೊಟ್ಟು ಚಾಲನೆ ನೀಡಲಾಯಿತು. ಕಳೆದ ಹತ್ತು ತಿಂಗಳಿಂದ ವಾಟ್ಸಾಪ್ ಸಾಮಾಜಿಕ ಜಾಲತಾಣದಲ್ಲಿ ಈ ಕೂಟವು ಕಾರ್ಯನಿರ್ವಹಿಸುತ್ತಿದ್ದು, ಕೂಟಕ್ಕೆ ಸಂಘಟನೆಯ ರೂಪುಕೊಟ್ಟು ಸಹಕಾರ ಸಂಘದ ಕಾಯಿದೆ ಅನ್ವಯ ನೋಂದಾವಣೆ ಮಾಡಲು ತಿರ್ಮಾನಿಸಲಾಯಿತು. ಕಾಕೋಟುಪರಂಬು ಊರಿನವರ ಸಹಕಾರದಲ್ಲಿ ಕಾಕೋಟೀಶ್ವರ ಮತ್ತು ಅಕ್ಕವತಾಯಿ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು.

ದೇವಸ್ಥಾನದ ಸಮುದಾಯ ಭವನದಲ್ಲಿ ಪೊಂಬೊಳ್ಚ ಕೂಟದ ಹಿರಿಯರಾದ ಮಾಳೇಟಿರ ಶ್ರೀನಿವಾಸರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು, ಈ ಸಂದರ್ಭ ಸು.ಮೇ ಬಿದ್ದಂಡ ನಾಣಯ್ಯ ಉಪಸ್ಥಿತರಿದ್ದರು. ಪೊಂಬೊಳ್ಚ ಕೊಡವ ಕೂಟದ ಅಧ್ಯಕ್ಷರಾಗಿ ಕೋಟೆರ ಪೂಣಚ್ಚರವರು (ಕೊಪೂ) ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಮಾಳೇಟಿರ ಶ್ರೀನಿವಾಸ್, ಗೌರವ ಅಧ್ಯಕ್ಷರಾಗಿ ಬೊಪ್ಪಂಡ ಸರಳ ಕರುಂಬಯ್ಯ,
ಕಾರ್ಯದರ್ಶಿಯಾಗಿ ಕಾಣತಂಡ ವಿವೇಕ್ ಅಯ್ಯಪ್ಪ, ಸಹ ಕಾರ್ಯದರ್ಶಿಯಾಗಿ ಮಾತಂಡ ದೇಚಮ್ಮ ಅಚ್ಚಯ್ಯ, ಖಜಾಂಚಿಯಾಗಿ ಬೊಟ್ಟಂಗಡ ತಿಲಕ್ ಮಾದಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಚಂಗೇಟಿರ ಕುಮಾರ್ ಸೋಮಣ್ಣ, ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ, ಮುಕ್ಕಾಟಿರ ಮೌನಿ ನಾಣಯ್ಯ, ಚೇನಂಡ ತೇಜ ಬೋಪಣ್ಣ,
ಮೇಚುವಂಡ ಚೇತನ್ ಭೀಮಯ್ಯ, ಅಮ್ಮಾಟಂಡ ವಿಂದ್ಯಾ ದೇವಯ್ಯ, ಮುಲ್ಲೇರ ಮದು ಮಂಜುನಾತ್, ಪಳಂಗೀಯಂಡ ಶರತ್ ಬೋಪಣ್ಣ, ಕಾಣತಂಡ ಭವ್ಯ ದೇವಯ್ಯ ಹಾಗೂ ಶಿವಚಾಳಿಯಂಡ ರೋಹಿಣಿ ಕಿಶೋರ್, ಆಯ್ಕೆಯಾದರು.

ಈ ಸಂದರ್ಭದ ಮಾತನಾಡಿದ ಪೊಂಬೊಳ್ಚ ಕೂಟದ ಅಧ್ಯಕ್ಷ ಕೋಟೆರ ಉದಯ್ ಪೂಣಚ್ಚ ಸಂಘಟನೆಯ ದೇಯ ಉದ್ದೇಶವನ್ನು ಸಭೆಗೆ ತಿಳಿಸಿ, ಕೊಡವಾಮೆ ಮತ್ತು ಕೊಡವ ಭಾಷೆಯ ಬೆಳವಣಿಗೆ ಮತ್ತು ಉಳಿವಿಗಾಗಿ “ಕೊಡವಾಮೆಕಾಯಿತ್ ನೈಪ ನಿಟ್ಟ್’ಲೋರ್ ಮೊಟ್ಟ್” ಎಂಬ ದೇಯ ವಾಕ್ಯದಡಿ ಸಂಘಟನೆಯನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.

error: Content is protected !!