ಪುಸ್ತಕಗಳೇ ಜ್ಞಾನದ ಭಂಡಾರ!

ನಾಗರೀಕತೆ ಬೆಳೆದಂತೆ ಮನುಷ್ಯ ಜ್ಞಾನಿಯಾದ, ಜ್ಞಾನದ ಲಾಭಪಡೆದು ವಿಜ್ಞಾನಿಯಾದ, ಹತ್ತು ಹಲವು ಹೊಸತನಗಳಿಗೆ ಹರಿಕಾರನಾದ. ಮನುಷ್ಯನನ್ನು ಈ ಹಂತಕ್ಕೆ ತಂದು ನಿಲ್ಲಿಸಿದ್ದು ಆತನಲ್ಲಿ ಅಡಕವಾದ ಜ್ಞಾನ. ಅಂತಹ ಜ್ಞಾನವನ್ನು ಸಂರಕ್ಷಿಸಲು ಬಳಕೆಯಾಗಿದ್ದು ಪುಸ್ತಕಗಳು. ಪುಸ್ತಕಗಳೆಂದರೆ ತಲೆತಲಾಂತರದಿಂದ ತಲೆಮಾರುಗಳ ಇತಿಹಾಸವನ್ನು ಹೊತ್ತುತಂದ ಜ್ಞಾನವಾಹಿನಿಗಳು. ಮನುಷ್ಯನ ಜೀವನ ಹಾಗೂ ಜೀವಮಾನದೊಳಗೆ ಹಾಸುಹೊಕ್ಕಾಗಿ ಬಂದಿರುವ ಪುಸ್ತಕಗಳು ಅವನಿಂದ ಪಡೆದುದಕ್ಕಿಂತ ಕೊಟ್ಟೆದ್ದೇ ಹೆಚ್ಚು. ಹೀಗೆ ಸದಾ ಹರಿಯುವ ನದಿಯಂತೆ ಜ್ಞಾನವನ್ನು ಪಸರಿಸುವ ಕಾರ್ಯವನ್ನು ಮಾಡುತ್ತಲೇ ಬಂದಿರುವ ಪುಸ್ತಕಗಳನ್ನ ಇಂದು ನೆನೆಯುವ ದಿನ, ಅಂದರೆ ವಿಶ್ವ ಪುಸ್ತಕ ದಿನ.

ಈ ಪುಸ್ತಕ ದಿನವನ್ನು ಆಚರಿಸಬೇಕೆಂಬ ಆಲೋಚನೆ ಸಾಹಿತ್ಯ ಲೋಕದ ದಿಗ್ಗಜ, ಪ್ರಪಂಚದ ಪ್ರಖ್ಯಾತ ಬರಹಗಾರ ವಿಲಿಯಂ ಷೇಕ್ಸ್ಪಿಯರ್ ಅವರದ್ದು… ಅವರ ಜನ್ಮದಿನ ಏಪ್ರಿಲ್‌ 23. ಕಾಕಾತಾಳೀಯವೆಂದರೆ ಆತ ಹುಟ್ಟಿದ್ದು ಹಾಗೂ ಮರಣ ಹೊಂದಿದ್ದೂ ಇದೇ ದಿನದಂದು. ಜಗತ್ತಿನ ಸಾಹಿತ್ಯ ಲೋಕಕ್ಕೆ ಆತ ನೀಡಿದ ಕೊಡುಗೆ ಸ್ಮರಿಸುವ ಸಲುವಾಗಿ ಆತನ ಜನ್ಮದಿನವನ್ನು ಪುಸ್ತಕ ದಿನವನ್ನಾಗಿ ಆಚರಿಸಲಾಗುತ್ತದೆ. ಷೇಕ್ಸ್ಪಿಯರ್ ಜೊತೆ ಬರವಣಿಗೆ ಲೋಕಕ್ಕೆ ಅಕ್ಷರ ದಾನ ಮಾಡಿದ ಮೈಕೆಲ್ ಡಿ ಸರ್ವಾಂಟಿಸ್ ಮತ್ತು ಇಂಕಾ ಗಾರ್ಸಿಲಾಸೊ ದಿ ಲ ವೆಗಾ ಅವರ ಜನ್ಮದಿನವೂ ಇವತ್ತೇ. ಹೀಗೆ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಕೊಟ್ಟ ಈ ಮೂವರು ಮಹನೀಯರನ್ನು ನೆನೆಪಿಸಿಕೊಳ್ಳುವ ಸಲುವಾಗಿ ಆಚರಣೆಗೆ ಬಂದಿದ್ದೇ ವಿಶ್ವ ಪುಸ್ತಕ ದಿನ.

ಜನರಲ್ಲಿ ಓದುವ, ಸಾಹಿತ್ಯವನ್ನು అರಿತುಕೊಳ್ಳುವ ಹಾಗೂ ಪುಸ್ತಕಗಳನ್ನು ರಚಿಸಿ, ಪ್ರಕಟಿಸುವ ಅಭಿರುಚಿ ಹೆಚ್ಚಿಸುವುದು ಮತ್ತು ಕೃತಿಸ್ವಾಮ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಪುಸ್ತಕ ದಿನವನ್ನು ಆಚರಿಸಲಾಗುತ್ತದೆ.

ಸಾಮಾನ್ಯವಾಗಿ ಪುಸ್ತಕಗಳೆಂದರೆ ಒಂದಕ್ಕೊಂದು ಅಂಟುಹಾಕಿದ ಅಥವಾ ಜೋಡಿಸಿದ ಕಾಗದಗಳ ಸಮೂಹ. ಹೀಗೆ ಒಟ್ಟಾಗಿ ಸೇರಿದ ಹೊತ್ತಿಗೆಯ ಪ್ರತಿ ಮಗ್ಗಲನ್ನು ಪುಟವೆಂದು ಕರೆಯಲಾಗುತ್ತದೆ. ಈ ಪಾರ್ಶ್ವಗಳಲ್ಲೇ ಮನುಕುಲದ ಅಗತ್ಯ, ಅವಶ್ಯ ಮತ್ತು ಜ್ಞಾನ ಹಂಚಬಹುದಾದ ಮಾಹಿತಿಗಳನ್ನು ಮುದ್ರಿಸಲಾಗಿರುತ್ತದೆ. ಆದರೆ ವಿಶಾಲಾರ್ಥದಲ್ಲಿ ನೋಡುವುದಾದರೆ ಪುಸ್ತಕಗಳೆಂದರೆ ಮಾಹಿತಿಗಳ ಕಣಜ, ಮನುಷ್ಯ ಉಗಮದಿಂದ ಇಂದಿನವರೆಗೂ ಆತನ ಬದುಕಿನ ರೀತಿ ನೀತಿ ಪರಂಪರೆಯನ್ನು ಸಾಗಿಸಿಕೊಂಡು ಬಂದ ಮಾಹಿತಿ ಕೋಶಗಳು. ಭೂತ ಹಾಗೂ ಭವಿಷ್ಯದ ಮಾರ್ಗದರ್ಶಿಗಳು. ಬರವಣಿಗೆ ಮೂಲಕ ಪುಸ್ತಕಗಳಲ್ಲಿ ಮಾಹಿತಿಯನ್ನು ಸೇರಿಸಲಾಗುತ್ತದೆ.
ಒಂದು ಪ್ರದೇಶದ ಸಂಸ್ಕೃತಿ, ಜನಜೀವನವನ್ನು, ಆ ಭಾಷೆಯ ಮೂಲಕ ಬೆಳೆಸಲು ಪುಸ್ತಕಗಳು ಸಹಾಯ ಮಾಡುತ್ತವೆ. ಭೂಮಿಯ ಮೇಲೆ ಮಾನವನ ಅಸ್ತಿತ್ವವನ್ನು ಪುಸ್ತಕ ನೆರವಾಗುತ್ತವೆ. ಪ್ರತಿಯೊಂದು ಪುಸ್ತಕವು ಹಲವು ತಲೆಮಾರುಗಳನ್ನು ದಾಟಿ ಹೋಗುತ್ತವೆ. ನಮ್ಮ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವನ್ನು ಪುಸ್ತಕಗಳು ಮಾಡುತ್ತವೆ…

ಆರಂಭದಲ್ಲಿ ಪುಸ್ತಕ ಬೃಹತ್‌ ಗಾತ್ರ ಹೊಂದಿಕೊಂಡಿತ್ತು. ಕಾಲಕಳೆದಂತೆ ತಂತ್ರಜ್ಞಾನ ಬದಲಾದಂತೆ ಈಗ ಅದೇ ಪುಸ್ತಕಗಳು ಕೈಯೊಳಗಿನ ಹಿಡಿಕೆಗಳ ರೂಪದಲ್ಲಿ, ಮೊಬೈಲ್‌ ಕಂಪ್ಯೂಟರ್‌ ಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ಹಾಳೆಯ ಜೊತೆಜೊತೆಗೆ ತಾಂತ್ರಿಕ ಮಾಧ್ಯಮಗಳ ಮೂಲಕವೂ ವಿದ್ಯುನ್ಮಾನ ತರಂಗಗಳಾಗಿ ಬದಲಾಗಿ ಪುಸ್ತಕ ರೂಪದಲ್ಲಿ ದಾಖಲಾಗುತ್ತಿವೆ. ಎಕರೆಗಟ್ಟಲೆ ಇದ್ದ ಗ್ರಂಥಾಲಯಗಳೀಗ ಮೊಬೈಲ್‌ ಎನ್ನುವ ಪುಟ್ಟ ವಸ್ತುವಿನೊಳಗೆ ಅಡಕವಾಗುವ ಹಂತಕ್ಕೆ ತಂತ್ರಜ್ಞಾನ ಅದನ್ನು ಬದಲಿಸಿ ನಿಲ್ಲಿಸಿದೆ. ದಾಖಲಿಸುವ ಮಾಧ್ಯಮ ಬದಲಾಗುತ್ತಿದೆಯೇ ಹೊರತು ಓದುವ ವಿಧಾನವಲ್ಲ ಎನ್ನುವುದು ಸಮಾಧಾನಕರ ವಿಚಾರ…

ತಲೆಬಗ್ಗಿಸಿ ಓದಿಸಿಕೊಂಡು ಹೋಗುವ ಪುಸ್ತಕಗಳು ಮುಂದೆ ನಾವು ತಲೆ ಎತ್ತಿ ನಿಲ್ಲಲು ಸಹಕರಿಸುತ್ತವೆ. ಇತಿಹಾಸ ಅರಿಯದವ ಇತಿಹಾಸ ಸೃಷ್ಟಿಸಲಾರ, ಎಂಬ ಬಾಬಾ ಸಾಹೇಬ್‌ ಅಂಬೇಡ್ಕರ್‌ ಉಕ್ತಿ ಮಾತಿನಂತೆ ಇತಿಹಾಸ ಸೃಷ್ಟಿಸಬೇಕಾದರೆ ಆತ ದಾಖಲಾದ ಇತಿಹಾಸವನ್ನು ಓದಲೇ ಬೇಕು. ಅದಿಲ್ಲದಿದ್ದರೆ ಅವನ ಸಾಧನಾ ಕನಸ್ಸು ಸದಾ ಶೂನ್ಯವೇ

ಪ್ರಸ್ತುತದ ಸನ್ನಿವೇಶಗಳಲ್ಲಂತೂ ನಮ್ಮ ವಿದ್ಯಾರ್ಥಿ ಜೀವನದ ಕೊನೆಯವರೆಗೂ ನಮ್ಮ ಬೆನ್ನ ಹಿಂದೆಯೇ ಇದ್ದು ಬೆಂಬಲಿಸುವ ಜೊತೆಗಾರ ಪುಸ್ತಕ. ಆದರೆ ಅವನನ್ನೇ ಕಡೆಗಣಿಸಿದರೆ, ತೆರೆದು ನೋಡದೆ ಇದ್ದರೆ, ಆತನ ಬೆಂಬಲವನ್ನು ಅರ್ಥೈಸಿಕೊಳ್ಳುವುದಾದರೂ ಹೇಗೆ? ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಬೆನ್ನ ಹಿಂದೆಯೇ ನಿಂತು ಬೆಂಬಲಿಸುವ ಸ್ನೇಹಿತನನ್ನು ಗೌರವಿಸುವುದಕ್ಕಾಗಿ ಈ ಪುಸ್ತಕ ದಿನವನ್ನ ಆಚರಿಸುವ ಅಗತ್ಯತೆ ಇದೆ

✍🏻 ಅನ್ವೇಶ್ ಕೇಕುಣ್ಣಾಯ

error: Content is protected !!