ಪುರಾತನ ಪಂಚಲೋಹ ವಿಗ್ರಹ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

ಕೊಡಗು ಜಿಲ್ಲೆಯಲ್ಲಿ ಪುರಾತನ ಪಂಚಲೋಕ ವಿಗ್ರಹ ಕಳ್ಳತನ ಮಾಡುತ್ತಿದ್ದವರ ಬಂಧನ ಮಾಡಲಾಗಿದೆ.
13.7 ಲಕ್ಷ ರುಪಾಯಿ ಮೌಲ್ಯದ ವಿಗ್ರಹಗಳ ಜೊತೆ ಮೂವರ ಬಂಧನ ಮಾಡಿ, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ವ್ಯಾನ್ ಜೊತೆ ಕೃಷಿ ಯಂತ್ರೋಪಕರಣ ಪಂಚಲೋಹ, ಕಂಚಿನ ವಿಗ್ರಹಗಳ ವಶ ಪಡಿಸಿಕೊಳ್ಳಲಾಗಿದೆ.
ನೀರುಕೊಲ್ಲಿಯ ಮಂಜು, ಲವ, ಮೇಕೇರಿಯ ರೋಹಿತ್ ಬಂಧಿತರು ಎಂದು ತಿಳಿದು ಬಂದಿದೆ. ಮಡಿಕೇರಿ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಕರ್ಣಂಗೇರಿ,ಕಗ್ಗೋಡ್ಲು ಗ್ರಾಮದಲ್ಲಿ ಕೃತ್ಯ ನಡೆದಿರುವುದಾಗಿ ಎಸ್ಪಿ ಕ್ಷಮಾ ಮಿಶ್ರ ಮಾಹಿತಿ ನೀಡಿದ್ದಾರೆ.