ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕುಂಬ್ಯಾರು ಕಲಾಡ್ಚ ಸಂಭ್ರಮ

ಕೊಡಗು: ಜಿಲ್ಲೆಯ ಪ್ರಮುಖ ದೇವರಾದ ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕುಂಬ್ಯಾರು ಕಲಾಡ್ಚ ಆಚರಣೆ ವಿಜೃಂಭಣೆಯಿಂದ ನೆರವೇರಿದೆ.ನಾಪೋಕ್ಲು ಸಮೀಪದ ಕಕ್ಕಬೆ ಗ್ರಾಮದಲ್ಲಿರುವ ಈ ದೇವಾಲಯದಲ್ಲಿ ದೇವತಕ್ಕರಾದ ಪರಂದಂಡ ಕುಟುಂಬಸ್ಥರ ಎತ್ತು ಪೋರಾಟ ಮತ್ತು ಬಲಿವಾಡುವಿನ ಆಗಮನದಿಂದ ಆರಂಭಗೊಂಡು,ತುಲಾಭಾರ ಸೇವೆಗಳು ಸೇರಿದಂತೆ ಮಲ್ಮ ಬೆಟ್ಟಕ್ಕೆ ಉತ್ಸವ ಮೂರ್ತಿಯನ್ನು ಹೊತ್ತು ಕಾಲ್ನಡಿಗೆಯಲ್ಲಿ ತೆರಳಿ ಪೂಜೆ ಸಲ್ಲಿಸಲಾಯಿತು.ಹಲವು ದಿನಗಳಿಂದ ದೇವರ ಕಟ್ಟು ಇರುವುದನ್ನು ಇದೇ ಸಂದರ್ಭ ಹಿಂತೆಗೆಯಲಾಯಿತು.ಇದೇ ವೇಳೆ ನೆಲಜಿ ಗ್ರಾಮದಲ್ಲಿರುವ ಪಾಡಿ ಇಗ್ಗುತಪ್ಪ ದೇವಾಲಯದಲ್ಲೂ ಕುಂಬ್ಯಾರು ಕಲಾಡ್ಚ ಆಚರಿಸಲಾಯಿತು.
ಕೊರೊನಾದ ಎಲ್ಲಾ ನಿಯಮಗಳನ್ನು ಪಾಲಿಸಿ ಅನ್ನ ಸಂತರ್ಪಣೆ,ಮಾಸ್ಕ್ ವಿತರಣೆಯಂತಹಾ ಕಾರ್ಯಗಳು ನಡೆದವು.