ಪಾಕಿಸ್ತಾನದಲ್ಲಿ ದಾಖಲೆಯ ಬೆಲೆ ಏರಿಕೆ

ಇಮ್ರಾನ್ ಖಾನ್, ನಯಾ ಪಾಕಿಸ್ತಾನ ನಿರ್ಮಿಸ್ತೀನಿ ಅಂತ ಭರವಸೆ ಕೊಟ್ಟು ಪಾಕಿಸ್ತಾನದ ಆಡಳಿತ ಚುಕ್ಕಾಣಿ ಹಿಡಿದರು. ಆದ್ರೆ ಅವರ ಆಡಳಿತಾವಧಿಯಲ್ಲಿ ಪಾಕಿಸ್ತಾನದ ಆರ್ಥಿಕತೆ ಮಕಾಡೆ ಮಲಗಿದೆ. ವರ್ಷಗಳ ಹಿಂದೆ ಎಮ್ಮೆ ಹಾಗೂ ಕಾರ್​ಗಳನ್ನ ಹರಾಜು ಹಾಕುವ ಮಟ್ಟಕ್ಕೆ ಪಾಕಿಸ್ತಾನದ ಆರ್ಥಿಕತೆ ಪಾತಳಕ್ಕೆ ಕುಸಿದಿತ್ತು. ಇದೀಗ ಮತ್ತೆ ಪಾಕ್​ನಲ್ಲಿ ಹಣದುಬ್ಬರ ಉಂಟಾಗಿದೆ. ತರಕಾರಿ, ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದೆ. ಅದ್ರಲ್ಲೂ ಒಂದೇ ಒಂದು ಕೋಳಿಮೊಟ್ಟೆಯ ಬೆಲೆ 30 ಪಾಕಿಸ್ತಾನಿ ರೂಪಾಯಿಗೆ ಏರಿದೆ ಅಂದ್ರೆ ನೀವು ನಂಬಲೇಬೇಕು.

ಹೌದು ಹಣದುಬ್ಬರದ ಹಿನ್ನೆಲೆ ಪಾಕಿಸ್ತಾನದಲ್ಲಿ ಮೊಟ್ಟೆ, ಸಕ್ಕರೆ, ಗೋಧಿ ಇತ್ಯಾದಿ ಆಹಾರ ಪದಾರ್ಥಗಳು ದಾಖಲೆ ಮಟ್ಟದ ಬೆಲೆ ಏರಿಕೆ ಕಂಡಿವೆ. ಕಳೆದ ಕೆಲ ದಿನಗಳ ಹಿಂದೆ ಇಮ್ರಾನ್ ಖಾನ್, ಸಕ್ಕರೆ ಬೆಲೆ ಇಳಿದಿದೆ ಎಂದಿದ್ರು.

ಆದ್ರೆ ಸದ್ಯ ಒಂದು ಕೆ.ಜಿ ಸಕ್ಕರೆ ಬರೋಬ್ಬರಿ 104 ರೂಪಾಯಿಗೆ ಮಾರಾಟವಾಗ್ತಿದ್ದು, ಪಾಕಿಸ್ತಾನದ ಹಣದುಬ್ಬರ ಹಿಂದಿನ ಎಲ್ಲಾ ದಾಖಲೆಯನ್ನ ಮುರಿದಿದೆ.

ದಾಖಲೆಯ ಮಟ್ಟಕ್ಕೆ ರಾಕೆಂಟ್​ನಂತೆ ಏರಿದ ಆಹಾರ ಸಾಮಗ್ರಿ ರೇಟ್

  • 1 ಮೊಟ್ಟೆ: 30 ರೂ., ಅಂದ್ರೆ ಒಂದು ಡಜನ್​​ಗೆ ಸುಮಾರು 350 ರೂ/₹160
  • 1 ಕೆ.ಜಿ ಸಕ್ಕರೆ: 104 ರೂ.
  • 1 ಕೆ.ಜಿ ಗೋಧಿ: 60 ರೂ.
  • ಒಂದು ಕೆ.ಜಿ ಶುಂಠಿ: 1000 ರೂ.

(1 ಪಾಕಿಸ್ತಾನಿ ರೂಪಾಯಿ ಭಾರತೀಯ ಕರೆನ್ಸಿಯಲ್ಲಿ 2.17 ರೂಪಾಯಿಗೆ ಸಮ. ಹೀಗಾಗಿ ಪಾಕಿಸ್ತಾನದಲ್ಲಿ ಸದ್ಯದ ಒಂದು ಡಜನ್ ಮೊಟ್ಟೆ ಬೆಲೆ 350 ರೂಪಾಯಿ ಅಂದ್ರೆ ಭಾರತೀಯ ಕರೆನ್ಸಿಯಲ್ಲಿ ₹160)

ಅಂದ್ಹಾಗೆ ಪಾಕಿಸ್ತಾನದ ಶೇಕಡ 25ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ ಕೆಳಗಿದ್ದಾರೆ. ಈ ಜನರು ತಮ್ಮ ದಿನನಿತ್ಯದ ಆಹಾರದಲ್ಲಿ ಮೊಟ್ಟೆಯನ್ನ ಹಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಸದ್ಯ ಬೇಡಿಕೆ ಹೆಚ್ಚಾದ ಹಿನ್ನೆಲೆ ಮೊಟ್ಟೆಯ ದರ ಗಗನಕ್ಕೇರಿದೆ ಎನ್ನಲಾಗಿದೆ.

ಕಳೆದ ವರ್ಷ ಡಿಸೆಂಬರ್​​ನಲ್ಲಿ ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು, 40 ಕೆಜಿ ಗೋಧಿ ಬೆಲೆ 2000 ರೂಪಾಯಿಗೆ ಏರಿತ್ತು. ಈ ವರ್ಷ ಅಕ್ಟೋಬರ್​ನಲ್ಲಿ ಆ ದಾಖಲೆಯೂ ಮುರಿದಿದ್ದು, ಸದ್ಯ ಗೋಧಿ 40 ಕೆ.ಜಿಗೆ 2400 ರೂಪಾಯಿ(1 ಕೆ.ಜಿಗೆ 60 ರೂಪಾಯಿ) ಆಗಿದೆ.

error: Content is protected !!