ಪಶ್ಚಿಮ ಘಟ್ಟಗಳ ಪಂಚಾಯಿತಿಯಲ್ಲಿ ನಾಮಪತ್ರ ಸಲ್ಲಿಕೆಯಾಗದೆ ಅಸಮಧಾನ: ಕೊಡಗಿನಲ್ಲೂ ಹೋರಾಟ ನಡೆಯುತ್ತಾ?

ವಿಶೇಷ ವರದಿ:ಗಿರಿಧರ್ ಕೊಂಪುಳೀರ

ಕೊಡಗು: ರಾಜ್ಯದ ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿನ ಕಸ್ತೂರಿ ರಂಗನ್ ವರದಿ ಅನುಷ್ಟಾನ ಸಂಬಂಧ ರಾಜ್ಯದಲ್ಲಿ ಅಸಮಧಾನ ಮೇಲಿನಿಂದ ಮೇಲೆ ಕೇಳಿ ಬರುತ್ತಲೇ ಇದೆ.ಇದೇ ಸಂಬಂಧ ಘಟ್ಟದ ವ್ಯಾಪ್ತಿಗೆ ಬರುವ ಶಾಸಕರು ಮಾಜಿ ಸ್ಪೀಕರ್ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಸೇರಿದಂತೆ ಹಲವು ಶಾಸಕರು ಕಳೆದ ಅಧಿವೇಶನದ ಕಡೆಯ ದಿನ ಅಸಮಧಾನ ಹೊರಹಾಕಿ ಶೀಘ್ರವೇ ರಾಜ್ಯ ಸರ್ಕಾರ ಹಸಿರು ಪೀಠದ ಮೇಲೆ ಒತ್ತಡ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಡ ಹಾಕಿದ್ದಾರೆ.ಇದೇ ತಿಂಗಳ ಅಂತ್ಯಕೆ ಗಡುವು ನೀಡಿರುವ ಹಿನ್ನಲೆಯಲ್ಲಿ ಯುದ್ದಕಾಲೇ ಶಸ್ತ್ರಾಭ್ಯಾಸ ನಡೆಸುವ ಕಾರ್ಯ ನಡೆಯಬೇಕಿದ್ದು,ಕೇರಳ ಮಾದರಿಯಲ್ಲಿ ಅಲ್ಲಿನ ಚರ್ಚಿನ ಫಾದರ್ ಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ನಡೆಸಿದ ಹೋರಾಟದ ಪರಿಣಾಮ ಅವರಿಗೆ ಸ್ವಲ್ಪ ಪ್ರಮಣಾದಲ್ಲಿ ರಿಲೀಫ್ ಸಿಕ್ಕಿರುವ ಬೆನ್ನಲ್ಲೆ ತಯಾರಿ ನಡೆಯಬೇಕಿದ್ದು ಇದು ಈ ಭಾರಿ ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯ್ತಿಗಳಲ್ಲಿ ಅಸಮಧಾನ ಪರಿಣಾಮ ಹಾಸನ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ನಾಮಪತ್ರಗಳೇ ಸಲ್ಲಿಕೆಯಾಗಿಲ್ಲ,ಈ ನಡುವ ಕೊಡಗಿನಲ್ಲೂ ಹೋರಾಟದ ರೂಪುರೇಷೆ ನಡೆಯುತ್ತಿದೆ ಎನ್ನಲಾಗಿದೆ. ಕಳೆದ ಭಾರಿ ಹೋರಾಟವನ್ನು ನಡೆಸಲು ಕೊಡಗಿನಲ್ಲಿ ಪಕ್ಷಾತೀತವಾಗಿ ಸಮಿತಿ ರಚನೆಯಾಗಿತ್ತು,ಹೋರಾಟಗಳೂ ನಡೆದವು. ಹಸರು ಪೀಠ ಅನುಷ್ಟಾನಗೂಳಿಸಲು ಸಿದ್ದತೆ ನಡೆಸುತ್ತಿದೆ,ಇತ್ತ ಕೊಡಗು ಹೊರತುಪಡಿಸಿ ಇತರೆ ಜಿಲ್ಲೆಗಲ್ಲಿ. ನಾಮಪ್ರಗಳು ಸಲ್ಲಿಕೆಯಾಗದಿರುವುದು ಚುನಾವಣಾ ಆಯೋಗಕ್ಕೆ ತಲೆನೋವಾಗಿ ಪರಿಣಮಿಸಿದೆ.

ಒಂದೆಡೆ ಮನವೊಲಿಕೆಗೆ ಯತ್ನ ನಡೆಸಲಾಗುಥ್ತಿದ್ದರೂ ಪ್ರಯೋಜನವಾಗುತ್ತಿಲ್ಲ ಎಲ್ಲಡೆ ವಿರುದ್ದ ಆಗುತ್ತಿರುವ ಕಾರಣಕ್ಕೆ ತಕ್ಷಣವೇ ಒಂದು ಅಂತಿಮ ನಿರ್ಧಾರಕ್ಕೆ ಬರಬೇಕಾದ ಅನಿವಾರ್ಯವಾಗಿದ್ದು,ವಿರೋಧ ವ್ಯಕ್ತಪಡಿಸಿರುವ ಜಿಲ್ಲೆಗಳಿಂದ ಜಿಲ್ಲಾಡಳಿತ ಚುನಾವಣಾ ಆಯೋಗಕ್ಕೆ ವರದಿ ಸಹ ಸಲ್ಲಿಕೆಯಾಗಿದ್ದು,ಸದ್ಯಕ್ಕೆ ಬಾಲ್ ಈಸ್ ಅಂಡರ್ ಚುನಾವಣಾ ಆಯೋಗದ ಬಳಿಯಿದ್ದು,ಅವರ ನಿಲುವು ಏನಾಗಲಿದೆ ಎನ್ನುವುದೇ ಇದೀಗ ಯಕ್ಷ ಪ್ರಶ್ನೆ.

error: Content is protected !!