fbpx

ಪಶ್ಚಿಮ ಘಟ್ಟಗಳ ಕಾರ್ಯ ಪಡೆ ಅಧ್ಯಕ್ಷರಿಂದ ಲಕ್ಷಣ ತೀರ್ಥ ನದಿ ಸ್ವಚ್ಛತಾ ಕಾರ್ಯದ ಬಗ್ಗೆ ಸ್ವಾಮೀಜಿಗಳೊಂದಿಗೆ ಸಮಲೋಚನೆ

ರಾಜ್ಯದ ಪ್ರಮುಖ ನದಿಗಳಲೊಂದಾದ ಲಕ್ಷ್ಮಣ ತೀರ್ಥ ನದಿ ಸ್ವಚ್ಚತಾ ಕಾರ್ಯ ದ ಬಗ್ಗೆ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಕಾರ್ಯ ಪಡೆ ಅದ್ಯಕ್ಷ ರಾದ ಶಾಂತೆಯಂಡ ರವಿಕುಶಾಲಪ್ಪ ರವರು ಹುಣಸೂರು ತಾಲ್ಲೂಕಿನ ಕಟ್ಟೆಮಳವಾಡಿ ಗ್ರಾಮಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು.

ನಂತರ ಸಮೀಪದ ಗಾವಡ್ಗೆರೆಯ ಗುರು ಜಂಗಮವಾಡಿ ಮಠದ ಶ್ರೀ ಶ್ರೀ ಶ್ರೀ ನಟರಾಜ ಸ್ವಾಮಿಗಳನ್ನು ಶ್ರಿ ಮಠದಲ್ಲಿ ಭೇಟಿಮಾಡಿ ನದಿ ಸ್ವಚ್ಚತಾ ಕಾರ್ಯದ ರೂಪುರೇಷೆ ಯ ಬಗ್ಗೆ ಚರ್ಚೆ ನಡೆಸಿದರು,ಕಟ್ಟೆಮಳವಾಡಿ ಗ್ರಾಮಸ್ಥರು ಈ ಸಂದರ್ಭದಲ್ಲಿ ಮನವಿಸಲ್ಲಿಸಿ ಹಲವು ವರ್ಷಗಳಿಂದ ಕೊಡಗಿನ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹುಟ್ಟಿ ಮೈಸೂರು ಜಿಲ್ಲೆಗೆ ನೀರುಣಿಸುವ ಪವಿತ್ರವಾದ ಲಕ್ಷ್ಮಣ ತೀರ್ಥ ನದಿ ಸ್ವಚ್ಚತೆ ಮಾಡಲು ಹಲವು ಬಾರಿ ಸರಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ವಾಗಿಲ್ಲ ನದಿ ಸ್ವಚ್ಚತಾ ಕಾರ್ಯಕ್ಕೆ ಸರಕಾರದಿಂದ ನೂರಾರು ಕೋಟಿ ಹಣ ಬಿಡುಗಡೆಯಾಗಿದ್ದು ಇಚ್ಛಾಶಕ್ತಿ ಯ ಕೊರತೆಯಿಂದ ಹಣ ಸದ್ಬಳಕೆ ಆಗುತ್ತಿಲ್ಲ ..ಈ ನೀರು ಗದ್ದೆ ಹೊಲಗಳಿಗೆ ಬಳಸುವುದರಿಂದ ಸಾಂಕ್ರಾಮಿಕ ರೋಗ ಹರಡುತ್ತಿದ್ದು,ಸುತ್ತಮುತ್ತಲಿನ ಗ್ರಾಮಸ್ಥರು ಕುಡಿಯುವ ನೀರನ್ನು ಹತ್ತಾರು ಕಿ.ಮಿ.ದೂರದಿಂದ ತರಬೇಕಾಗಿದ್ದು ಕೂಡಲೇ ತಮ್ಮ ಅಧಿಕಾರ ವ್ಯಾಪ್ತಿ ಯನ್ನು ಬಳಸಿ ನದಿ ಸ್ವಚ್ಚತೆಗೆ ಕ್ರಮ ವಹಿಸಬೇಕೆಂದು ಕೋರಿಕೊಂಡರು.ನಂತರ ಮಾತನಾಡಿದ ಅದ್ಯಕ್ಷರು ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಗಮನಕ್ಕೆ ತರಲಾಗುವುದು ಅಲ್ಲದೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರೊಂದಿಗೆ ಚರ್ಚಿಸಿ ಶೀಘ್ರವಾಗಿ ಇದಕ್ಕೆ ಒಂದು ರೂಪುರೇಷೆ ಸಿದ್ದಗೊಳಿಸಲಾಗುವುದು ಅಲ್ಲದೆ ಸರಕಾರದ ಮಟ್ಟದಲ್ಲಿ ಕೂಡ ಇದರ ಸ್ವಚ್ಚತಾ ಕಾರ್ಯಗಳ ಬಗ್ಗೆ ಒತ್ತಡ ಹಾಕಲಾಗುವುದು ಎಂದರು. ಇದೇ ವೇಳೆ ಮಾತನಾಡಿದ ಸ್ವಾಮೀಜಿಗಳು ನದಿಯ ಇಕ್ಕೆಲಗಳಲ್ಲಿ ಮರಗಳನ್ನು ನೆಡುವುದಲ್ಲದೆ ಇಡೀ ಹುಣಸೂರು ನಗರದ ಕೊಳಚೆ ನೀರು ಹಾಗೂ ಕಟ್ಟೆಮಳವಾಡಿ ಗ್ರಾಮದ ಕೊಳಚೆ ನೀರು ನದಿಗೆ ನೇರವಾಗಿ ಕಸಲುವೆಗಳ ಮೂಲಕ ಹರಿಯುತ್ತಿದ್ದು ಮಳೆಯ ಪ್ರಾರಂಭದ ದಲ್ಲಿ ದುರ್ವಾಸನೆ ಬರುತ್ತಿದ್ದು ಇತ್ತೀಚಿನ ಆದುನಿಕ ತಂತ್ರಜ್ಞಾನದ ಮೂಲಕ ನದಿನೀರನ್ನು ಸ್ವಚ್ಚತ ಗೊಳಿಸಿ ಕುಡಿಯಲು ಬಳಸುವುದಲ್ಲದೆ ಇದರಿಂದಾಗಿ ಪರಿಸರ ಕೂಡ ಸ್ವಚ್ಚತವಾಗಿರುವುದು ಮಠದ ವತಿಯಿಂದ ಸಂಪೂರ್ಣವಾಗಿ ಸಹಕಾರ ನೀಡಲಾಗುವುದೆಂದರು.ಇದೇ ಸಂದರ್ಭದಲ್ಲಿ ಸ್ವಾಮಿಜಿ ರವಿಕುಶಾಲಪ್ಪ ರವರನ್ನು ಶಾಲು ಹೊದಿಸಿ ಗೌರವಿಸಿದರು.ಭೇಟಿ ವೇಳೆಯಲ್ಲಿ ಸಂಘ ಪರಿವಾರದ ಹೊದ್ದೆಟ್ಟಿ ಸುಧೀರ್ ಕುಮಾರ್, ಹುಣಸೂರು ವಿಶ್ವಹಿಂದೂ ಪರಿಷತ್ತಿನ ಕಾರ್ಯ ಕರ್ತರಾದ ವರದರಾಜ್ ಪಿಳ್ಳೈ, ಮಾಜಿ ತಂಬಾಕು ಮಂಡಳಿ ನಿರ್ದೇಶಕ ಕಿರಣ್ ,ಸೇವ್ ಅವರ್ ಅರ್ಥ್ ಕ್ಲಬ್‌ ನ ನಿರ್ದೇಶಕ ಗಜೇಂದ್ರ ಹುಣಸೂರು ಉಪಸ್ಥಿತರಿದ್ದರು.

error: Content is protected !!