ಪವರ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ರಕ್ತ ದಾನ ಶಿಬಿರ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಹುಟ್ಟು ಹಬ್ಬದ ನಿಮಿತ್ತ ಕುಶಾಲನಗರ ಅರೆಭಾಷೆ ಗೌಡ ಯೂತ್ ಮತ್ತು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಕುಶಾಲನಗರದ ಗೌಡ ಸಮಾಜದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ರಕ್ತದಾನ ಮೂಲಕ “ಜೀವ ಉಳಿಸಿ,ಆರೋಗ್ಯ ಹಂಚಿಕೊಳ್ಳಿ” ಎನ್ನುವ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಈ ಶಿಬಿರಕ್ಕೆ ಸಹಸ್ರಾರು ಮಂದಿ ಸ್ವಯಂ ಪ್ರೇರಿತರಾಗಿ ಆಗಮಿಸಿ, ಅಮೂಲ್ಯ ರಕ್ತವನ್ನು ದಾನ ಮಾಡಿ ಸಾರ್ಥಕತೆ ಮೆರೆದರು. ನುರಿತ ವೈದ್ಯರಿಂದ ರಕ್ತ ಸಂಗ್ರಹ ಮಾಡಲಾಯಿತು.