ಪಳಗುತ್ತಿದ್ದಾನೆ ಕಾಡಾನೆ ಭೀಷ್ಮ!

ಕೊಡಗು: ಹಾಸನದಲ್ಲಿ ಸೆರೆಯಾದ ಕಾಡಾನೆಗೆ ಭೀಷ್ಮ ಎಂದು ನಾಮಕರಣ ಮಾಡಲಾಗಿದೆ.
ಸಕಲೇಶಪುರ ವ್ಯಾಪ್ತಿಯಲ್ಲಿ ಸಾಕಷ್ಟು ಪುಂಡಾಟ ನಡೆಸುತಾತಿದ್ದ ಕಾಡಾನೆಗಳ ಸೆರೆಗೆ ತೆರಳಿದ ಅಭಿಮನ್ಯು ನೇತೃತ್ವದ ಮತ್ತಿಗೋಡು ಆನೆ ಶಿಬಿರದ ಸಾಕಾನೆಗಳು 28 ವರ್ಷದ ಗಂಡಾನೆಯನ್ನು ದುಬಾರೆಯ ಕ್ರಾಲ್ ನಲ್ಲಿಟ್ಟು ಪಳಗಿಸಲಾಗುತ್ತಿದೆ.
ದುಬಾರೆ ಶಿಬಿರದ ಮಾವುತ ಈರಾ ಮತ್ತು ಕಾವಾಡಿ ಮಧು ಎಂಬುವವರು ಭೀಷ್ಮನನ್ನು ಪಳಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ದುಬಾರೆ ವ್ಯಾಪ್ತಿಯಲ್ಲಿ ಆಗಿಂದ್ದಾಗ್ಗೆ ಬೀಳುವ ಮಳೆಯ ಪರಿಣಾಮ ಭೀಷ್ಮನನ್ನು ಹೊರ ಬಿಟ್ಟು ತರಬೇತಿ ನೀಡುವುದು ಕಷ್ಟವಾಗಿದ್ದು,ಇನ್ನೊಂದೆರೆಡು ತಿಂಗಳು ವಾತಾವರಣ ಸರಿ ಹೊಂದುವರೆಗೆ ಹೊರಗೆ ಬಿಡುವುದು ಕಷ್ಟ ಎಂದು ರೇಂಜರ್ ಅನನ್ಯ ಕುಮಾರ್ ತಿಳಿಸಿದ್ದಾರೆ.

ಸದ್ಯಕ್ಕೆ ಭೀಷ್ಮ ಆನೆಗೆ ಶಿಬಿರದಲ್ಲಿ ಇತರೆ ಸಾಕಾನೆಗಳಿಗೆ ನೀಡುವ ಪೌಷ್ಟಿಕ ರಾಗಿ ಮುದ್ದೆ,ಹುಲ್ಲು ,ಸೊಪ್ಪನ್ನು ನೀಡಲಾಗುತ್ತಿದದ್ದು ಆಗಿಂದಾಗೆ ವೈದಕೀಯ ತಪಾಸಣೆ ನಡೆಸಲಾಗುತ್ತಿದೆ.