fbpx

ಪರ್ಲಕೋಟಿ ತಂಡಕ್ಕೆ ಗೌಡ ಕಪ್,ಕುಡೆಕಲ್ಲು ರನ್ನರ್ಸ್

ಕೊಡಗು ಅರೆಭಾಷೆ ಗೌಡ ಜನಾಂಗದ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ವತಿಯಿಂದ ಆಯೋಜಿಸಲ್ಪಡುತ್ತಿರುವ ಕುಟುಂಬಗಳ ನಡುವಿನ “ಕುಟುಂಬ 2021” ಕಪ್ ಪರ್ಲಕೋಟಿ ತಂಡ ಮುಡಿಗೇರಿಸಿಕೊಂಡಿದೆ.

ಸೆಮಿಫೈನಲ್ ಪ್ರವೇಶ ಮಾಡಿದ್ದ ಪರ್ಲಕೋಟಿ ದಂಬೇಕೋಡಿ ನಡುವೆ ನಡೆದ ಪಂದ್ಯಾವಳಿಯಲ್ಲಿ ,ಪರ್ಲಕೋಟಿ ತಂಡ ಫೈನಲ್ ಪ್ರವೇಶಿಸಿದರೆ, ಇತ್ತ ಕುಡೆಕಲ್ಲು ಮತ್ತು ಉಳುವಾರು ನಡುವಿನ ಪಂದ್ಯಾವಳಿಯಲ್ಲಿ ಕುಡೆಕಲ್ಲು ತಂಡ ಫೈನಲ್ ಪ್ರವೇಶಿಸಿದ್ದವು.
ಇದರಲ್ಲಿ ಉಳುವಾರನ ತಂಡ ನಿರ್ಧಿಷ್ಟ 6 ಓವರ್ ನಲ್ಲಿ ಏಳು ವಿಕೇಟ್ ಕಳೆದುಕೊಂಡು 49 ಗಳಿಸಿದರೆ,ಕುಡೆಕಲ್ಲು ತಂಡ 5.2 ಓವರ್ ನಲ್ಲಿ 52/2 ಗಳಿಸಿ ಫೈನಲ್ ತಲುಪಿದರೆ.ಪರ್ಲಕೋಟಿತಂಡ 6 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 61 ಗಳಿಸಿದರೆ ದಂಬೆಕೋಡಿ ತಂಡ ನಿಗದಿತ 56 ರನ್ ಗಳಿಸ ಫೈನಲ್ ಪಂದ್ಯ ವಂಚಿತರಾದರು.

ಅಂತಿಮವಾಗಿ ಪರ್ಲಕೋಟಿ ತಂಡ 6 ಓವರ್ ನಲ್ಲಿ ಒಂದು ವಿಕೆಟ್ ಕಳೆದು 81 ರನ್ ಗಳಿಸಿದರೆ,ಕುಡೆಕಲ್ಲು ತಂಡ 63/3 ಗೆ ತೃಪ್ತಿ ಪಡೆದುಕೊಳ್ಳಬೇಕಾಯಿತು.

error: Content is protected !!