ಪರಿಹಾರ ಹಣದ ಬಗ್ಗೆ ಅಪಪ್ರಚಾರ ಶುದ್ಧ ಸುಳ್ಳು: ಶಾಸಕ ರಂಜನ್ ಸ್ಪಷ್ಟನೆ

ಈ ಬಗ್ಗೆ ರಾಜ್ಯ ಸರ್ಕಾರ ಕೊಡಗು ಜಿಲ್ಲೆಯನ್ನು ಕಡೆಗಣಿಸಿಲ್ಲ. ಜಿಲ್ಲಾಡಳಿತದ ಖಾತೆಯಲ್ಲಿ ಇರುವ ಪರಿಹಾರ ಹಣ ನೀಡಲು ಸೂಚನೆ ನೀಡಲಾಗಿದ್ದು, ಆರಂಭದಲ್ಲಿ ಮೂಲಭೂತ ಸೌಕರ್ಯ, ಕೃಷಿ ಪರಿಹಾರ, ಆಸ್ತಿ ಪಾಸ್ತಿ , ಜಾನುವಾರು, ಸೇರಿದಂತೆ ಇತರೆ ಕಾರ್ಯ ಜಿಲ್ಲಾಡಳಿತ ಮಾಡುತ್ತಿದೆ ಎಂದ ಮಡಿಕೇರಿಯ ಶಾಸಕ ಅಪ್ಪಚ್ಚು ರಂಜನ್ ಸೋಮವಾರಪೇಟೆಯಲ್ಲಿ ತಿಳಿಸಿದ್ದಾರೆ.
ಕೊಡಗಿನ ಪ್ರವಾಹ ಮತ್ತು ಮಳೆ ಇಂದ ಆಗಿರುವ ಪ್ರದೇಶದಲ್ಲಿ ಆಗಿರುವ ನಷ್ಟದ ಪರಿಹಾರ ಬಗ್ಗೆ ರಾಜ್ಯ ಸರ್ಕಾರ ಕಡೆಗಣಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಪರಿಹಾರ ಹಣದ ಬಗ್ಗೆ ಮಾಹಿತಿ ಶುದ್ಧ ಸುಳ್ಳು.
ಮೂಲಭೂತ ಸೌಕರ್ಯ ಪೂರ್ಣ ಬಳಿಕ ಇತರೆ ವೈಯುಕ್ತಿಕ ಪರಿಹಾರದ ಬಗ್ಗೆ ಸ್ಥಳ ಪರಿಶೀಲನೆಯ ಬಳಿಕ ನಡೆಸಲಾಗುವುದು ಎಂದು ಅವರು ತಿಳಿಸಿದರು.