ಪರಿಸರ ಸಂರಕ್ಷಣೆಗೆ ಪಣ ತೊಟ್ಟ ಮಹಿಳೆಯರು

ಕೊಡಗು:ಕಾವೇರಿ ನದಿ ಸಂರಕ್ಷಣೆ ಹಲವು ಸಂಘ ಸಂಸ್ಥೆಗಳು ಹಲವು ಯೋಜನೆ ಹಮ್ಮಿಕೊಂಡಿವೆ.ಜಗ್ಗಿ ವಾಸುದೇವ್ ಸೆಲೆಬ್ರಿಟಿಗಳನ್ನು ಸೇರಿಸಿ ಅಭಿಯಾನ ಮಾಡಿದರೆ,ಕೆಲವು ಸ್ವಾಮೀಜಿಗಳು ಪಾದಯಾತ್ರೆ ಕೈಗೊಳ್ಳುತ್ತಿವೆ. ಇದೀಗ ಚೆನೈ ಮೆರಕಿ ರೋಟರಿ ಮಹಿಳಾ ಕ್ಲಬ್ ತಲಕಾವೇರಿಯಿಂದ ಕಾವೇರಿ ನದಿ ಸಮುದ್ರ ಸೇರುವ ಪಾಂಪುಹಾರ್ ವರೆಗಿನ 1842 ಕಿಲೋಮೀಟರ್ ನದಿಯ ಪಾವಿತ್ರತೆ ಮತ್ತು ಪರಿಸರ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ.ಕ್ಲಬ್ ನ ಅಧ್ಯಕ್ಷೆ ಸುಚಿತ್ರ ನೇತೃತ್ವದ 32 ಮಹಿಳೆಯರ ತಂಡ ಕಾರಿನಲ್ಲಿ ತರಳಿ ಅಭಿಯಾನದ ಕಾರ್ಯಕ್ಕೆ ಮುಂದಾಗಿದ್ದು, ಜೀವನದಿ ತಲಕಾವೇರಿಯಲ್ಲಿ ಡಿವೈಎಸ್ಪಿ ಬಾರಿಕೆ ದಿನೇಶ್ ಹಸಿರು ನಿಶಾನೆ ತೋರಿಸಿ ಶುಭ ಹಾರೈಸಿದರು.

error: Content is protected !!