ಪರಾರಿಯಾಗಿದ್ದ ಸೊಂಕಿತ ವ್ಯಕ್ತಿಯನ್ನು ಮತ್ತೆ ಆಸ್ಪತ್ರೆಗೆ ಸೇರಿಸಿದ ಪೊಲೀಸರು!

ವೈದ್ಯರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಗುಣಮುಖನಾಗಿದ್ದರೂ ಮಡಿಕೇರಿ ಕೊವಿಡ್ ಆಸ್ಪತ್ರೆಯ ವೈದ್ಯರು ಆಸ್ಪತ್ರೆಯಿಂದ ಕಳುಹಿಸುತ್ತಿಲ್ಲ ಎಂದು ಬೇಸರಗೊಂಡ ಅರಗಕಾಡುವಿನ ಸೋಂಕಿತ ವ್ಯಕ್ತಿಯೋವ೯ ಆಸ್ಪತ್ರೆಯಿಂದ ಪರಾರಿಯಾಗಿ ಮತ್ತೆ ಕೋವಿಡ್ ಆಸ್ಪತ್ರೆಗೆ ಪೋಲಿಸರ ಹರಸಾಹಸದಿಂದ ಸೇರಿರುವ ಘಟನೆ ನಡೆದಿದೆ.ಕಳೆದ ಮಂಗಳವಾರ ರೋಗಿ ತಪ್ಪಿಸಿಕೊಂಡಿರುವ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ವೈದ್ಯಾಧಿಕಾರಿಗಳು ದೂರು ನೀಡಿದ್ದು ಈತನ ಪತ್ತೆಗಾಗಿ ಪೋಲಿಸರು ಬಲೆ ಬೀಸಿದ್ದರು, ಈ ನಡುವೆ ಇಂದು ಬೆಳಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿದ ಸೋಂಕಿತ ವ್ಯಕ್ತಿ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹೇಳಿಕೊಂಡಿದ್ದ.ಇದೇ ವೇಳೆ ಚಾಣಾಕ್ಷ್ಯದಿಂದ ಹಿಡಿದು
ಮತ್ತೆ ಆಸ್ಪತ್ರೆ ಕಳುಹಿಸಲು ಅಂಬ್ಯುಲೆನ್ಸ್ ತರಿಸಿದ್ದರು.

ಅ್ಯಂಬುಲೆನ್ಸ್ ಬರುತ್ತಿರುವಂತೆಯೇ ಅಲ್ಲಿಂದಲೂ ಓಟಕಿತ್ತ ಸೋಂಕಿತ ವ್ಯಕ್ತಿ ಪೊಲೀಸರಿಗೇ ಮತ್ತೆ ಚಳ್ಳೆ ಹಣ್ಣು ತಿನ್ನಿಸಿದ್ದು, ಕೆಲವು ಗಂಟೆಗಳ ಬಳಿಕ ಕೋವಿಡ್ ಸೋಂಕಿತ ತನ್ನ ಪರಿಚಿತರ ಬೈಕ್ ಮೂಲಕ ವಿರಾಜಪೇಟೆ ಬಳಿ ಸಾಗುತ್ತಿರುವ ಮಾಹಿತಿ ದೊರಕಿದ ಹಿನ್ನಲೆಯಲ್ಲಿ ಅಲ್ಲಿಗೆ ತೆರಳಿದ ಪೊಲೀಸರು ಈತನನ್ನು ಸುತ್ತುವರಿದು ಕೊನೆಗೂ ವಶಕ್ಕೆ ಪಡೆಯಲು ಸಫಲರಾದರು.ಇದೀಗ
ಅ್ಯಂಬುಲೆನ್ಸ್ ಮೂಲಕ ಸೋಂಕಿತ ವ್ಯಕ್ತಿಯನ್ನು ಮತ್ತೆ ಕೋವಿಡ್ ಕೇರ್ ಕೇಂದ್ರಕ್ಕೆ ಕರೆತಂದು ದಾಖಲಿಸಲಾಗಿದೆ.

error: Content is protected !!