fbpx

‘ನೆಹೆರು’ ಮಹಾನ್ ರಾಷ್ಟ್ರ ನಾಯಕರೇ?

                                       –ರಜತ್ ರಾಜ್ ಡಿ.ಹೆಚ್
ಪಂಡಿತ್ ಜವಹರಲಾಲ್ ನೆಹೆರು ನಮ್ಮ ಭಾರತದ ಮೊದಲ ಪ್ರಧಾನಿ. ದೇಶವನ್ನು ಎಲ್ಲಾ ತರಹವೂ ಸುಭದ್ರಗೊಳಿಸಿ ಅದಕ್ಕೊಂದು ಭದ್ರ ಬುನಾದಿ ಹಾಕಬೇಕಿದ್ದ ಮಹತ್ತರ ಜವಾಬ್ದಾರಿ  ನೆಹೆರು ಅವರ ಮೇಲಿತ್ತು. ಜನರೂ ಅವರ ಮೇಲೆ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ನೆಹೆರು ಅವರ ಅಂದಿನ ಆಡಳಿತವನ್ನು ನೆನೆಯುವುದಾದರೆ, ಅವರ ಹಲವಷ್ಟು ಎಡವಟ್ಟು ನಿರ್ಧಾರಗಳು ನಮ್ಮನ್ನು ಚಿಂತೆಗೀಡು ಮಾಡುತ್ತದೆ. ಅಂದು ಕೆಲವು ವಿಚಾರಗಳ ಕುರಿತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು, ಖಡಕ್ ನಡೆಗಳನ್ನು ಇಟ್ಟಿದ್ದರೆ ಬಹುಶಃ ಭಾರತಕ್ಕೆ ಇಂದು ಎದುರಾಗಿರುವ ಸಮಸ್ಯೆಗಳು ಎದುರಾಗುತ್ತಲೇ ಇರಲಿಲ್ಲ.

ಆ ಸಮಸ್ಯೆಗಳ ಕುರಿತು ಸಂಕ್ಷಿಪ್ತವಾಗಿ ನೋಡುವುದಾದರೆ:

ನೇಪಾಳ ಈಗ ಚೀನಾದೊಂದಿಗೆ ಸೇರಿ ಕಾಡುತ್ತಿದೆ

ನೇಪಾಳಕ್ಕೆ ಪ್ರಜಾಪ್ರಭುತ್ವ ಪರಿಚಯಿಸಿದ ರಾಜ ತ್ರಿಭುವನ್

1950-51ರಲ್ಲಿ ನೇಪಾಳದ ರಾಜ ತ್ರಿಭುವನ್ ಅವರು ಪ್ರಜಾಪ್ರಭುತ್ವವನ್ನು ನೇಪಾಳಕ್ಕೆ ಪರಿಚಯಿಸಿದರು. ಆಗ ಭಾರತಕ್ಕೆ ನೇಪಾಳವನ್ನು ತೆಗೆದುಕೊಳ್ಳುವಂತೆ ಕೋರಿದರು. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ‘ಭೂ ವಿಸ್ತೀರಣವಾದಿ’ ಎಂಬ ನಿಂದನೆ ತಲೆ ಮೇಲೆ ಬಂದು ಬಿಡುತ್ತದೆ ಎಂಬ ಭಯದಿಂದ ತನ್ನ ತಲೆ ಪ್ರತಿಷ್ಠೆಗೆ  ಅದನ್ನು ನಿರಾಕರಿಸಿದರು ನೆಹೆರು.

ಬಲೂಚಿಸ್ತಾನವನ್ನೂ ಬಿಟ್ಟು ಕೊಟ್ಟರು

1948ರಲ್ಲಿ ಬಲೂಚಿಸ್ತಾನದ ನವಾಬ್ ಖಾನ್ ಬಲೂಚಿಸ್ತಾನವನ್ನು ಭಾರತದ ಭಾಗವಾಗಿ ತೆಗೆದುಕೊಳ್ಳಿ ಎಂದು ಆಗಿನ ಪ್ರಧಾನಿ ನೆಹೆರುಗೆ ಔಪಚಾರಿಕವಾಗಿ ಪತ್ರವೊಂದನ್ನು ಬರೆದರು. ಆಗ ನೆಹೆರು ತನ್ನ ತಲೆ ಪ್ರತಿಷ್ಠೆಯ‌ ಕಾರಣದಿಂದ ಮತ್ತೆ ಅದನ್ನು ತಿರಸ್ಕರಿಸಿದರು. ನಂತರ ಬಂದೂಕಿನ ಭಯದ ಬಲದೊಂದಿಗೆ ಪಾಕಿಸ್ತಾನ ಬಲೂಚಿಸ್ತಾನವನ್ನು ಆಳಲು ಶುರುವಿಟ್ಟಿತು. ಪರಿಣಾಮವಾಗಿ ಏನಕ್ಕೂ ಪ್ರಯೋಜನವಿರದ ಬರ ಬಂಜರು ಭೂ ಪ್ರದೇಶವಾಗಿ ದಟ್ಟ‌ ದಾರಿದ್ರ್ಯತೆಯಲ್ಲಿ ಯಾವುದೇ ಅಭಿವೃದ್ಧಿ ಹೊಂದದೆ ಉಳಿದು ಹೋಯಿತು. ಬಲೂಚಿಸ್ತಾನವನ್ನು ಭಾರತದ್ದಾಗಿ‌ ಮಾಡಿಕೊಂಡಿದ್ದಿದ್ದರೆ, ಪಾಕಿಸ್ತಾನ ಗಡಿ ತಂಟೆಗಳೂ ಇಂದಿಗೆ ಭಾರತಕ್ಕೆ ಇರುತ್ತಿರಲ್ಲಿಲ್ಲ.

ಬ್ರಾಹ್ಮಣರ ನರಮೇಧ ಹಾಗು ಹಿಂದೂಗಳ ಕಡೆಗಣನೆ

ಚಿತ್ರ1:ಗಾಂಧಿ ಹತರಾದ ನಂತರದ ಚಿತ್ರ.

  ಚಿತ್ರ 2: ಗೋಡ್ಸೆ ಅವರು ಹಾರಿಸಿದ ಗುಂಡುಗಳು ಹಾಗು ರಿವಾಲ್ವರ್ 

ಚಿತ್ರ 3: ಪತ್ರಕರ್ತರಾಗಿದ್ದ ವಿನಾಯಕ್ ನಾಥೂರಾಮ್ ಗೋಡ್ಸೆ

1948ರಲ್ಲಿ  ಎಂ.ಕೆ ಗಾಂಧಿಯನ್ನು ನಾಥುರಾಮ್ ವಿನಾಯಕ್ ಗೋಡ್ಸೆ  ಗುಂಡಿಕ್ಕಿ ಹತ್ಯೆ ಗೈದ ನಂತರ, ನೆಹೆರು ತನ್ನ ಹಿಂಬಾಲಕರ‌ ಮೂಲಕ ಅವನೊಬ್ಬ ಮಹಾರಾಷ್ಟ್ರದ ಬ್ರಾಹ್ಮಣ ಎಂಬ ಕಾರಣಕ್ಕೆ 4,000ದಷ್ಟು ಮಹಾರಾಷ್ಟ್ರೀಯ ಬ್ರಾಹ್ಮಣರ ನರಮೇಧ ಮಾಡಲಾಯಿತು. ನಂತರ ಹಿಂದುಗಳ ಧಮನ ಮಾಡಲು ನಿರ್ಧರಿಸಿದ ನೆಹೆರು ರಾಮ ರಾಜ್ಯ ಪರಿಷತ್, ಹಿಂದೂ ಮಹಾ ಸಭಾ, ಆರ್.ಎಸ್.ಎಸ್ ಅಂತಹ ಮಹಾನ್ ಸಂಘಟನೆಗಳನ್ನು ನಿಷೇಧಿಸಿದರು. ನಂತರ ಹಿಂದೂಗಳು ಕೋಮುವಾದಿಗಳು ಎಂಬ ಗುಲ್ಲನ್ನು ಎಲ್ಲಾ ಕಡೆ ಹಬ್ಬಿಸಿದರು ನೆಹೆರು ಛೇಲಾಗಳು. ನೆಹೆರು ಭಾರತವನ್ನು ಜಾತ್ಯಾತೀತೆಯೆಡೆಗೆ‌ ತಿರುಗಿಸಿದರೆ, ಅತ್ತ ಪಾಕಿಸ್ತಾನ ಮಹಮ್ಮದ್ ಅಲಿ ಜಿನ್ನಾ ಅಡಿಯಲ್ಲಿ ಇಸ್ಲಾಮಿಕ್ ರಾಷ್ಟ್ರವಾಯಿತು.

ಗ್ವಾಡಾರ್ ದ್ವೀಪವನ್ನು ವಶಕ್ಕೆ ಪಡೆಯಲಾಗಲಿಲ್ಲ…

ಚೀನಾದ ಹಿಡಿತದಲ್ಲಿರುವ ಗ್ವಾಡರ್ ದ್ವೀಪ

ಓಮನ್ ಗ್ವಾಡಾರ್ ದ್ವೀಪವನ್ನು ಭಾರತಕ್ಕೆ ನೀಡಲು ಆಸಕ್ತಿ ತೋರಿತು. ನೆಹೆರು ಅದನ್ನೂ ನಿರ್ಲಕ್ಷಿಸಿ, ಪ್ರಧಾನಿಯ ಕುರ್ಚಿಯ ಮೇಲೆ ಬೆಚ್ಚಗೆ ಕುಳಿತೇ ಇದ್ದರು. ನಂತರ ಅದರ ಮೇಲಿನ ನಿಯಂತ್ರಣವನ್ನು ಪಾಕಿಸ್ತಾನ ಹಿಡಿದು, ನಂತರ ಚೀನಾದ ಕೈಗೊಪ್ಪಿಸಿತು. ಅದು ಭಾರತದ ಭದ್ರತೆಯ ದೃಷ್ಟಿಯಲ್ಲಿ ಹಲವಾರು ಸವಾಲುಗಳನ್ನು ಎಸೆಯಿತು.

ಉಕ್ಕಿನ ಮನುಷ್ಯ ಇರದಿದ್ದರೆ ನಿಜಾ಼ಮರೇ ಆಳುತ್ತಿದ್ದರಲ್ಲಿ

ಭಾರತದ ಉಕ್ಕಿನ ಮನುಷ್ಯ

ನಿಜಾ಼ಮರ ಹಿಡಿತದಲ್ಲಿದ್ದ ಹೈದರಾಬಾದನ್ನು ಭಾರತಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲೂ ನೆಹೆರುಗೆ ತೀರಾ ನಿರಾಸಕ್ತಿ ಇತ್ತು. ನೆಹೆರು ವಿದೇಶ ಪ್ರವಾಸದಲ್ಲಿದ್ದ ಸಮಯವನ್ನೇ ನೋಡಿಕೊಂಡು ಆಗಿನ ಕೇಂದ್ರ ಗೃಹ ಮಂತ್ರಿಗಳಾಗಿದ್ದ ಸರದಾರ್ ವಲ್ಲಬಾಯ್ ಪಟೇಲರ ಅಣತಿಯಂತೆ ‘Operation Polo’ ನಡೆಸಿ, ಯಶಸ್ವಿಯಾಗಿ ಹೈದರಾಬಾದನ್ನು ಭಾರತದ್ದೇ ಭಾಗವಾಗಿಸಿದರು. ನಂತರ ನೆಹೆರು ಈ ವಿಚಾರ ಕೇಳಿ ಕೆಂಡಾಮಂಡಲವಾಗಿದ್ದರು!

ಆರ್.ಎಸ್.ಎಸ್ ಇಂದಾಗಿ ಗೋವಾ ನಮ್ಮದಾಯಿತು

ರಾಷ್ಟ್ರೀಯ ಸ್ವಯಂ ಸೇವಕ ಸಂಘ

ನೆಹೆರು ಗೋವಾವನ್ನು ಪೋರ್ಚುಗೀಸರ ಹಿಡಿತದಿಂದ ಬಿಡಿಸಲು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದರು. ನೆಹೆರುವಿನ ದೇಶ ವಿರೋಧಿ ಧೋರಣೆ ಮತ್ತು ತಲೆ ಪ್ರತಿಷ್ಠೆಯನ್ನು ಧಿಕ್ಕರಿಸಿ, ಗೋವಾವನ್ನು ವಿದೇಶಿಗರ ನಿಯಂತ್ರಣದಿಂದ ಮುಕ್ತವಾಗಿಸಿ, ಭಾರತಕ್ಕೆ ಸೇರಿಸಿತು.

ಯು.ಎನ್ ಶಾಶ್ವತ ಸದಸ್ಯತ್ವವನ್ನೇ ನಿರಾಕರಿಸಿದ್ದರು

ಎರಡು ಬಾರಿ ಯು.ಎನ್ ಶಾಶ್ವತ ಸದಸ್ಯತ್ವ ಸಿಗುವ ಅವಕಾಶ ದೊರೆತರೂ ಅದನ್ನು ತಿರಸ್ಕರಿಸಿದ ನೆಹೆರು ಶತ್ರು ಕಮ್ಯುನಿಷ್ಟ್ ರಾಷ್ಟ್ರ ಚೀನಾ ಹೆಸರನ್ನು ಅದಕ್ಕೆ ಶಿಫಾರಸ್ಸು ಮಾಡಿದ್ದರು.

ಏಕ ನೀತಿ ನಾಗರೀಕ ಸಂಹಿತೆ

ಏಕ ನೀತಿ ನಾಗರಿಕ ಸಂಹಿತೆ

ಸದಾ ನೆಹೆರು ಏಕ ನೀತಿ ನಾಗರೀಕ ಸಂಹಿತೆಯನ್ನು ವಿರೋಧಿಸುತ್ತಲೇ ಬಂದರು. ಏಕೆಂದರೆ ಅವರಿಗೆ‌ ಎಲ್ಲರಿಗೂ ಒಂದೇ ಕಾನೂನನ್ನು ತರುವ ಇರಾದೆ ಬೇಕಿರಲಿಲ್ಲ. ಮುಸ್ಲಿಮರ ತುಷ್ಟೀಕರಣಕ್ಕೆ ಬಿದ್ದ ನೆಹೆರು ಅದನ್ನು ವಿರೋಧಿಸುತ್ತಲೇ ಬಂದರು.

ನೇತಾಜಿ ಕುಟುಂಬದ ಮೇಲೆ ಬೇಹುಗಾರಿಕೆ

ಚಾಚಾ ನೆಹೆರು ಹಾಗು ನೇತಾಜಿ ಸುಭಾಷ್ ಚಂದ್ರ ಬೋಸ್

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬ ಸದಸ್ಯರ ಮೇಲೆ ಸತತ 20 ವರ್ಷಗಳ ಕಾಲ ಬೇಹುಗಾರಿಕೆ ನಡೆಸಲಾಯಿತು. ಇದು ನೆಹೆರುವಿನ ಅಧಿಕಾರ ದಾಹ ಹಾಗು ಪಟ್ಟ ಭದ್ರ ಹಿತಾಸಕ್ತಿ ಹೇಗಿತ್ತು ಎಂಬುದನ್ನು ಸಾರಿ ಹೇಳುತ್ತದೆ.

ಇನ್ನೂ ಹಲವಾರು ಎಡವಟ್ಟುಗಳು ಉದ್ದೇಶ ಪೂರ್ವಕವಾಗಿ ನೆಹೆರು ಮಾಡಿ ದೇಶಕ್ಕೆ ಅನ್ಯಾಯ ಎಸಗಿದ್ದಾರೆ. ಆದರ್ಶ ಗುಣಗಳೇ ಇರದ ಸ್ವಾರ್ಥ ರಾಜಕಾರಣಿ ಹಾಗು ದೇಶದ ಇಂದಿನ ಹಲವು ಸಂಕಷ್ಟಕರ ವಿಚಾರಗಳಿಗೆ ಮೂಲ ಪುರುಷನಾದ ನೆಹೆರುವಿನ ಹೆಸರಿನಲ್ಲಿ ಪ್ರತಿ ವರ್ಷವೂ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಿ, ನೆಹೆರುವನ್ನು ಗಣ್ಯ ವ್ಯಕ್ತಿ ಎಂಬಂತೆ ಎಷ್ಟೋ ಜನ ಮುಂದಿನ ಪೀಳಿಗೆಗಳಿಗೆ ಪರಿಚಯಿಸುತ್ತಾರೆ. ದೇಶಕ್ಕೆ ಗಂಡಾಂತರಗಳನ್ನೇ ಗಳಿಸಿಕೊಟ್ಟ, ಸ್ವಯಂ‌ ಘೋಷಿತ ಭಾರತ ರತ್ನ ನೆಹೆರು ಅವರ ಭಾವಚಿತ್ರ ಇಂದು ನಮಗೆ ಎಲ್ಲಾ ಸರಕಾರಿ ಕಛೇರಿ ಇಲಾಖೆಗಳಲ್ಲಿ ಹಾಕುವುದು ಒಂದು ದುರಂತ.

ನೆಹೆರು ಶೋಕಿ ಜೀವನ

ವಿಲಾಸಿ ಜೀವನ ನಡೆಸಿ, ವಿದೇಶ ಪ್ರವಾಸಗಳಲ್ಲೇ ಹೆಚ್ಚು ತಲ್ಲೀಣರಾಗಿ ತಲೆ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಸಲುವಾಗಿ ದೇಶದ ಸ್ವಾಭಿಮಾನವನ್ನೇ ಅಡಕ್ಕಿಟ್ಟ ಜವಹರಲಾಲ್ ನೆಹೆರು ಈ ದೇಶಕ್ಕೆ ಕೊಟ್ಟ ಮತ್ತೊಂದು ಕೊಡುಗೆ ಅದೇ ವಂಶ ರಾಜಕಾರಣ.ಕಛೇರಿ ಇಲಾಖೆಗಳಲ್ಲಿ ಹಾಕುವುದು ಒಂದು ದುರಂತ.

ನೆಹೆರು ವಂಶಜರು

ಕಾಲ ಬದಲಾಗಿದೆ ಮೊದಲಿನ ಹಾಗೆ ಜನರು ಕಿವಿ ಮೇಲೆ ಹೂ ಇಟ್ಟುಕೊಂಡಿಲ್ಲ. ಎಲ್ಲವನ್ನೂ ಪ್ರಜ್ಞಾವಂತರಾಗಿ ಯೋಚಿಸುತ್ತಿದ್ದಾರೆ. ನೆಹೆರುವಿನ ನಕಲಿ ಗಾಂಧಿಗಳ ಗದ್ದುಗೆ ಏರುವ ಕನಸು ಇನ್ನು ಅಷ್ಟು ಸುಲಭದ ಮಾತು ಅಲ್ಲ ಎಂಬುದು ಅಂತೂ ಖರೆ

error: Content is protected !!