ಪನ್ನೆ ಎಸ್ಟೇಟಿನ ನಿವಾಸಿಗಳಿಗೆ ದಲಿತ ಸಂಘರ್ಷ ‌ಸಮಿತಿಯಿಂದ ಆಹಾರ ಕಿಟ್ ವಿತರಣೆ

ಮಡಿಕೇರಿ: ಸುಂಟಿಕೊಪ್ಪದ ಪನ್ನೆ ಎಸ್ಟೇಟಿನ ತೋಟಕಾರ್ಮಿಕ ಬಡ ಕುಟುಂಬಗಳಿಗೆ ಕೊಡಗು‌ ಜಿಲ್ಲಾ ದಲಿತ ಸಂಘರ್ಷ ಸಮಿತಿ ಆಹಾರ ಕಿಟ್ ವಿತರಿಸಿತು. ಕೋವಿಡ್ ಸಂದರ್ಭ ಜಿಲ್ಲಾ ಸಮಿತಿಯೂ ಕೊಡಗಿನಾದ್ಯಂತ ಸಾವಿರಾರು ಬಡಕುಟುಂಬಗಳಿಗೆ ನೆರವಾಗುತ್ತಿದ್ದು, ದಲಿತ ಹಾಗು ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವ ಮೂಲಕ ಸಾಂತ್ವಾನ ಹೇಳುತ್ತಿದೆ.

ಕಿಟ್ ವಿತರಣಾ ಸಂದರ್ಭ ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್, ಸುಂಟಿಕೊಪ್ಪ ಸಂಘಟನಾ ಸಂಚಾಲಕ ಐತಪ್ಪ, ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ, ಮೊಗೆರ ಸಂಘದ ಜಿಲ್ಲಾಧ್ಯಕ್ಷ ಹಾಗು ದ.ಸಂ‌‌.ಸಮಿತಿಯ ಮಾಜಿ ತಾಲೂಕು ಸಂಘಟನ ಸಂಚಾಲಕ ಗೌತಮ್ ಶಿವಪ್ಪ ಸಂಘದ ಪ್ರಮುಖರಾದ ವಾಸು, ವಿಶ್ವನಾಥ್ ಮತ್ತಿತರು ಹಾಜರಿದ್ದರು.

error: Content is protected !!