ಪದವಿ ತರಗತಿಗೆ ಪ್ರವೇಶಾತಿ ಆರಂಭ

ಮಡಿಕೇರಿ ಸೆ.01:-ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಪುನರಾರಂಭಗೊಂಡಿದ್ದು, ಪ್ರಥಮ ವರ್ಷದ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಜ್ಯೇಷ್ಠತಾ ಪಟ್ಟಿ (ಮೆರಿಟ್ ಲಿಸ್ಟ್) ಯನ್ನು ಸೆಪ್ಟೆಂಬರ್ 2 ರಂದು ಕಾಲೇಜಿನ ವೆಬ್‍ಸೈಟ್ (https://fmkmcc.edu.in) ಮತ್ತು ಕಾಲೇಜಿನ ನೋಟೀಸ್ ಬೋರ್ಡ್‍ನಲ್ಲಿ ಪ್ರಕಟಿಸಲಾಗುವುದು.
ಬಿ.ಕಾಂ.(ಸಾಮಾನ್ಯ) ವಿಷಯಕ್ಕೆ ಅರ್ಜಿ ಸಲ್ಲಿಸಿದವರ ಪ್ರವೇಶಾತಿ ಸೆಪ್ಟೆಂಬರ್, 06 ಮತ್ತು 07 ರಂದು, ಬಿಸಿಎ/ ಬಿ.ಕಾಂ(ಸಿ.ಎ) ಪ್ರವೇಶಾತಿ ಸೆಪ್ಟೆಂಬರ್, 08 ರಂದು, ಬಿ.ಎ/ಬಿ.ಎಸ್ಸಿ ಪ್ರವೇಶಾತಿ ಸೆಪ್ಟೆಂಬರ್, 13 ರಂದು, ಬಿಬಿಎ/ ಬಿ.ಎಸ್.ಡಬ್ಲೂ/ ಬಿ.ಹೆಚ್.ಆರ್.ಡಿ ಪ್ರವೇಶಾತಿ ಸೆಪ್ಟೆಂಬರ್, 14 ರಂದು ಹಾಗೂ ಬಿ.ಕಾಂ(ಸಾಮಾನ್ಯ) ದ್ವಿತೀಯ ಅರ್ಹತೆ ಪಡೆದ ಅಭ್ಯರ್ಥಿಗಳ ಪ್ರವೇಶಾತಿಯು ಸೆಪ್ಟೆಂಬರ್, 15 ರಂದು ನಡೆಯಲಿದೆ. ಪ್ರಸಕ್ತ ಸಾಲಿನ ಪ್ರವೇಶಾತಿಯು ನೂತನ ರಾಷ್ಟ್ರೀಯ ಶಿಕ್ಷಣ ನೀತಿಗನುಗುಣವಾಗಿ ನಡೆಯಲಿದ್ದು, ಹೆಚ್ಚಿನ ಮಾಹಿತಿಯನ್ನು ಕಾಲೇಜಿಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.