ಪಡಿತರ ಚೀಟಿದಾರರು ಸೆ.16 ರಿಂದ 30 ರವರೆಗೆ ಇ-ಕೆವೈಸಿ ಮಾಡಲು ಅವಕಾಶ

ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆಯನ್ನು ಆಯಾಯ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಸೆಪ್ಟೆಂಬರ್, 01 ರಿಂದ 15 ರವರೆಗೆ ಸಂಗ್ರಹಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರದಿಂದ ಸೆಪ್ಟೆಂಬರ್, 16 ರಿಂದ 30 ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.
ಸೆಪ್ಟೆಂಬರ್, 16 ರಿಂದ 30 ರವರೆಗೆ ಪ್ರತೀ ದಿನ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪಡಿತರ ಆಹಾರ ಧಾನ್ಯ ವಿತರಣೆಯ ಜೊತೆಗೆ ಇ-ಕೆವೈಸಿ ಸಂಗ್ರಹಿಸಲು ಸರ್ಕಾರ ಅವಕಾಶವನ್ನು ಕಲ್ಪಿಸಿರುತ್ತದೆ.