fbpx

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜಿಸಿ ದಲಿತರಿಗೆ ಅವಕಾಶ ನೀಡಿ

ಶೂದ್ರ,ಹಿಂದುಳಿದ, ದಲಿತ ದಮನಿತ, ಆದಿವಾಸಿ, ಬುಡಕಟ್ಟು ಜನಾಂಗದವರ ಒಳಗೊಂಡು ಪಠ್ಯಪುಸ್ತಕ ಪರಿಷ್ಕರಣೆಯ ಸಮಿತಿ ರಚನೆ ಮಾಡಬೇಕು ರೋಹಿತ್ ಚಕ್ರತೀರ್ಥಯನ್ನು ವಜಾಗೊಳಿಸಬೇಕು.

ಶಿಕ್ಷಣ ಸಚಿವ ನಾಗೇಶ್ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಒಕ್ಕೂಟ ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನಾ ಕಾರ್ಯಕರ್ತರು ಬಿಜೆಪಿ ಸರ್ಕಾರ ಬಂದ ನಂತರ ಸಂಪೂರ್ಣ ಬ್ರಾಹ್ಮಣರ ತಂಡವನ್ನು ಸೇರಿಸಿ ಸಮಿತಿ ರಚಿಸಲಾಗಿದೆ ಎಂದು ಆರೋಪಿಸಿ ಪ್ರತಿಭಟಿಸಿದರು.

ಸಂಪೂರ್ಣ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯರನ್ನು ಬದಲಾಯುಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

error: Content is protected !!