fbpx

ಪಠ್ಯದಲ್ಲಿ ಬಸವಣ್ಣನ ವಿಚಾರಕ್ಕೆ ಧಕ್ಕೆ –ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹೋರಾಟದ ಎಚ್ಚರಿಕೆ

ಸೋಮವಾರಪೇಟೆ : 9 ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಭಾಗ -1 ರಲ್ಲಿ ಬಸವಣ್ಣನವರ ಪಾಠದಲ್ಲಿ ಕೆಲ ಅಂಶ ತೆಗೆದು ಅವರ ವಿಚಾರಕ್ಕೆ ತಂದಿದ್ದು.ಈ ಬಗ್ಗೆ ತುರ್ತಾಗಿ ಕ್ರಮಕೈಗೊಂದು ಸರಿಪಡಿಸದಿದ್ದಲ್ಲಿ ಹೋರಾಟ ನಡೆಸಬೇಕಾಗುತದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

9ನೇ ತರಗತಿಯ ‘ಸಮಾಜ ವಿಜ್ಞಾನ’ ಪಠ್ಯಪುಸ್ತಕ ಭಾಗ-1 ರಲ್ಲಿ ಬಸವಣ್ಣನವರನ್ನು ಕುರಿತ ಪಾಠವಿದೆ. ಸಮಾಜವನ್ನು ಸುಧಾರಿಸಲು ಹೋರಾಡಿದ ಆದ್ಯ ಪ್ರವರ್ತಕರಲ್ಲಿ ಬಸವೇಶ್ವರರು ಒಬ್ಬರಾಗಿದ್ದಾರೆ. ವೈದಿಕ ಮೂಲ ಧರ್ಮದಲ್ಲಿ ಬೇರೂರಿದ್ದ ಅಸಂಖ್ಯಾ ಧಾರ್ಮಿಕ ಆಚರಣಾ ವಿಧಿ ವಿಧಾನಗಳನ್ನು ಬದಿಗೊತ್ತಿ ಮಾನವೀಯ ಮೌಲ್ಯ ಆಧಾರಿತ ಸರಳ ವೀರಶೈವ ಸಿದ್ಧಾಂತವನ್ನು ಬಸವೇಶ್ವರರು ಹಾಗೂ ಅವರ ಅನುಯಾಯಿಗಳಾದ ಶರಣರು ಪ್ರಚಾರಪಡಿಸಿದರು. ಬಸವಣ್ಣ ಜಾತಿವ್ಯವಸ್ಥೆಯ ಕಡುವಿರೋಧಿಯಾಗಿದ್ದರು.

ಬಸವಣ್ಣನವರು ಉಪನಯನ ಸ್ವೀಕರಿಸಿದರು‌ ಎಂದು ಇದೆ .ಬಸವಣ್ಣನವರು ತನ್ನ ಅಕ್ಕನಿಗೆ ಇಲ್ಲದ ಉಪನಯನ ತನಗೇಕೆ ಎಂದು ಉಪ ನಯವನ್ನು ಧಿಕ್ಕರಿಸಿದರು.
ಬಸವಣ್ಣನವರು ಶೈವ ಗುರುಗಳ ಸಾನಿದ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದರು ಎಂಬುದು ತಪ್ಪುಮಾಹಿತಿ ಕಾರಣ ಬಸವಣ್ಣನವರು ಇಷ್ಟಲಿಂಗದ ಪ್ರವರ್ತಕರು ಇಷ್ಟಲಿಂಗ ಪೂಜಾ ಪದ್ಧತಿಯನ್ನು ಜಗತ್ತಿಗೆ ಅನಾವರಣಗೊಳಿಸಿದ್ದು ಪರಿಚಯಗೊಳಿಸಿದ್ದೆ ಬಸವಣ್ಣನವರು. ಹೀಗೆ ಹಲವಾರು ತಪ್ಪು ಮಾಹಿಗಳಿವೆ ಆದುದರಿಂದ ತಕ್ಷಣ ಇಡೀ ಪಠ್ಯವನ್ನೇ ತಡೆಹಿಡಿದು ಎಲ್ಲಿಯೂ ದೋಷವಾಗದಂತೆ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿರುವ ಅವರು ಇಲ್ಲವಾದಲ್ಲಿ ಹಿಂದಿನ ಪಠ್ಯವನ್ನೇ ಮುಂದುವರಿಸಬೇಕು.
ಈ ಬಗ್ಗೆ ಕೂಡಲೇ ತಪ್ಪುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗಬಹುದು ಎಂದು ತಿಳಿಸಿದ್ದಾರೆ.

error: Content is protected !!