ಪಟ್ಟಣ ಪಂಚಾಯತ್ ಅಧ್ಯಕ್ಷೆ ನಳಿನಿ ಗಣೇಶ್ ಕೊರೋನಾಗೆ ಬಲಿ

ಕೊಡಗು: ಸೋಮವಾರಪೇಟೆ ಪಟ್ಟಣ ಪಂಚಾಯತ್ ಅಧ್ಯಕ್ಷೆಯಾಗಿದ್ದ ನಳಿನಿ ಗಣೇಶ್ ಕೊರೊನಾಗೆ ಬಲಿಯಾಗಿದ್ದಾರೆ.ಮಡಿಕೇರಿಯ ಕೊವಿಡ್ ಸೆಂಟರ್ ನಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು,ಇಂದು ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ.

ಸೋಮವಾರ ಪೇಟೆ ತಾಲೂಕು ಜಾನಪದ ಪರಿಷತ್ ನಿರ್ದೇಶಕಿ ಕೂಡ ಆಗಿದ್ದ ಇವರು ಉತ್ತಮ ಗಾಯಕಿ
1990 ರಲ್ಲಿ ಮೊದಲ ಬಾರಿಗೆ ಸೋಮವಾರಪೇಟೆ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿ,1996, 2001,2007,2020 ರಲ್ಲಿಯೂ ಸದಸ್ಯೆಯಾಗಿ ಮುಂದುವರೆದಿದ್ದಾರೆ.1996 ರಲ್ಲೀ ಉಪಾಧ್ಯಕ್ಷೆ, 2007 ಮತ್ತು 2020 ರಲ್ಲೀ ಅಧ್ಯಕ್ಷೆ. 2 ಬಾರಿ ಸೋಮವಾರಪೇಟೆ ಪಂಚಾಯತ್ ಗೆ ಅಧ್ಯಕ್ಷೆ ಮತ್ತು 1 ಬಾರಿ ಉಪಾಧ್ಯಕ್ಷೆ ಆದ ಹಿರಿಮೆ ಇವರಿಗಿದೆ.
ನಳಿನೀ ಗಣೇಶ್ ಅವರ ಅಕಾಲಿಕ ನಿಧನಕ್ಕೆ ಶಾಸಕ ಎಂ ಪಿ ಅಪ್ಪಚ್ಚುರಂಜನ್ ಸಂತಾಪ ಸೂಚಿಸಿದ್ದಾರೆ.

error: Content is protected !!