fbpx

ಪಟ್ಟಣದ ಸುತ್ತಮುತ್ತ ಶ್ರದ್ಧಾ ಭಕ್ತಿಯ ಸ್ವರ್ಣಗೌರಿ ಹಬ್ಬ ಆಚರಣೆ

ಸೋಮವಾರಪೇಟೆ:- ಪಟ್ಟಣದ ಸುತ್ತಮುತ್ತಲಲ್ಲಿ ಭಕ್ತಾದಿಗಳು ಸ್ವರ್ಣಗೌರಿ ಹಬ್ಬವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಿದರು.

ಆಷಾಢಮಾಸದ ನಂತರ ಬರುವ ವರ್ಷದ ಮೊದಲಹಬ್ಬ ಗೌರಿಗಣೇಶ ಹಬ್ಬ ಮಹಿಳೆಯರಿಗೆ ವಿಶೇಷ ಹಾಗೂ ಸಂಭ್ರಮದ ಹಬ್ಬ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ತವರು ಮನೆಗೆ ಬಂದು ಸಂಭ್ರಮಿಸುವ ಹಾಗೂ ಸ್ವರ್ಣಗೌರಿ ಹಾಗೂ ನೆಂಟರಿಷ್ಠರಿಗೆ ಬಾಗಿನ ಅರ್ಪಿಸಿ ಹಬ್ಬವನ್ನು ಆಚರಿಸುತ್ತಾರೆ.

ಇಲ್ಲಿನ ಬಸವೇಶ್ವರ ದೇವಾಲಯದಲ್ಲಿ ವೀರಶೈವ ಸಮಾಜದ ಆಶ್ರಯದಲ್ಲಿ ಇಂದು ಸ್ವರ್ಣಗೌರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಬೆಳಿಗ್ಗೆ ಆನೇಕೆರೆಯಲ್ಲಿ ಸಂಪ್ರದಾಯದಂತೆ ಅರ್ಚಕ ಮುಥುನ್ ಶಾಸ್ತ್ರಿಯವರ ಪುರೋಹಿತ್ವದಲ್ಲಿ ಗಂಗೆ ಪೂಜೆಯೊಂದಿಗೆ ಗೌರಿ ಮೂರ್ತಿಯನ್ನು ತಂದು ದೇವಾಲಯಲ್ಲಿ ಪ್ರತಿಷ್ಠಾಪಿಸಲಾಯಿತು. ಗೌರಿಮೂರ್ತಿಗೆ ಕಡಲೆಹಿಟ್ಟಿನಿಂದ ಅಲಂಕರಿಸಿ ಪೂಜಿಸುವುದು ಇಲ್ಲಿನ ವಿಶೇಷ. ಮಹಿಳೆಯರು ದೇವಿಗೆ ಬಾಗಿನ ಅರ್ಪಿಸುವುದರೊಂದಿಗೆ ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಮಡಿಲು ಅಕ್ಕಿ ನೀಡಿ ಕೃತಾರ್ತರಾದರು.

ಪಟ್ಟಣದ ಸೋಮೇಶ್ವರ ದೇವಾಲಯ, ಕಟ್ಟೆ ಬಸವೇಶ್ವರ ದೇವಾಲಯ, ರಾಮಾಮಂದಿರ, ಖಾಸಗಿ ಬಸ್ಸ್ ನಿಲ್ದಾಣದಲ್ಲಿ ಸಾರ್ವಜನಿಕ ಗಣಪತಿ ಸಮಿತಿಸೇರಿದಂತೆ ಪಟ್ಟಣದ ವಿವಿದ ಬಡಾವಣೆಗಳಲ್ಲಿ ಗೌರಿಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.

error: Content is protected !!