ನ್ಯಾನೋ ಕಥೆ

ವಿಷಯ: ಸತ್ಯ
ಕಮಲ ನಿತ್ಯ ಹಾಳೆಯಲ್ಲಿ ಬರೆಯುವುದು ನೋಡಿ ಅಪ್ಪನಿಗೆಅನುಮಾನವಿತ್ತು… ಒಂದಿನ ಮಗಳೇ ಸಂದಾಗಿ ಓದು ಅವರಿವರ ಹುಡುಗರಕಡೆ ನಿಗಾ ಬೇಡ ಎಂದ..
ರಾತ್ರಿ ೧೧ ಆದ್ರೂ ಹಾಳೇಲಿ ಬರೆಯೋದನ್ನು ನೋಡಿ ತಂದೆ ಹತ್ತಿರಕ್ಕೆ ಬಂದು ಎಂತಾ ಬರೀತಿದಿ.? ಎಂದು ಹಾಳೆ ಕಿತ್ತುಕೊಂಡು ನೋಡಿದ. ‘ನಾನು ನೀನು’ ಎಂದು ಬರೆದಿತ್ತು. ಸಿಟ್ಟಿಂದ ರಪ್ಪನೆ ಎಳೆದು ನಂಗೆ ಅನುಮಾನವಿತ್ತು. ನೀನು ಯಾವುದೋ ಹುಡ್ಗಾನ ಪಿರೀತಿಗ್ ಬಿದ್ದೀದಿಯಾಂತ….
ಮಗಳು ಕವನ ,ಕಥೆ ಬರೆಯೋ ಸತ್ಯ ಮುಚ್ಚಿಟ್ಟಿದ್ದಳು.ಅಚ್ಚರಿತರಿಸಲು….
೨ ದಿನ ಕಾಲೇಜು,ಊಟ,ಬಿಟ್ಟುಕುಳಿತಳು..ಗೆಳತಿ ಸುಮ ಇವಳ ಮನೆಗೆ ಬಂದು ಯೂನಿವರ್ಸಿಟಿ ಯಿಂದಪತ್ರ ಬಂದಿದೆ..ಕಮಲ ಬರೆದ ಪದ್ಯಕ್ಕೆ ರಾಜ್ಯ ಪ್ರಶಸ್ತಿ ಸಿಕ್ಕಿದೆಯಂತೆ. ನಾಳೆಕಾಲೇಜಲ್ಲಿ ಸನ್ಮಾನವಿದೆ ಅಂದಾಗ..ಅಯ್ಯೋ!! ಮಗಳ ಮೇಲೆ ಎಂತಹಾ ತಪ್ಪು ಕಲ್ಪನೆ ಮಾಡ್ಕೊಂಡೆ ಎಂದು ಅವಳನ್ನು ತಬ್ಬಿಕೊಂಡು ಮಗಳಲ್ಲ…ನನ್ನ ಮಗ ನೀನು ಎಂದು ಬೆನ್ನುತಟ್ಟಿದನು……
ರಚನೆ :ವಾಣಿ ಎಸ್.ಕೆ ಸಾಗರ, ಶಿವಮೊಗ್ಗ..