fbpx

ನೋಡಿ ಸ್ವಾಮಿ ನಾವಿರೋದೆ ಹೀಗೆ!

ಚಿತ್ರ ವರದಿ:ಗಿರಿಧರ್ ಕೊಂಪುಳೀರಾ

ಕೊಡಗು ಜಿಲ್ಲೆಯಾದ್ಯಂತ ಕಾಫಿಕುಯಿಲಿನ ಕೆಲಸ ಬಿರುಸಿನಿಂದ ಸಾಗುತ್ತಿದೆ, ಅಕಾಲಿಕ ಮಳೆ ಪರಿಣಾಮ ಅಳಿದುಉಳಿದ ಕಾಫಿ ಫಸಲನ್ನು ಉಳಿಸಿಕೊಳ್ಳುವ ಯತ್ನದಲ್ಲಿ ರುವ ಬೆಳೆಗಾರರು ಕಾಡಾನೆ,ಹುಲಿ ಹಾವಳಿ ನಡುವೆ ಮತ್ತೂಬ್ಬ ಅಪಾಯ ತಂದೊಡ್ಡುವ ಜೀವಿಯ ಬಗ್ಗೆಯೂ ಎಚ್ಚೆತ್ತುಕೊಳ್ಳಬೇಕಾಗಿದೆ.

ಹೌದು,ಚಳಿಗೆ ಒಂದು ಸ್ವಲ್ಪ ಬಿಸಿಲು ಬಂದರೆ ಸಾಕು ಹಾವುಗಳು ಹೊರ ಬರುವುದು ಸಹಜ.ಕಾಫಿ ಗಿಡದಲ್ಲಿಯಾಗಲಿ ಇಲ್ಲಾ ತರಗೆಲೆಗಳಲ್ಲಾಗಲಿ ಕಾಫಿ ಕುಯಿಲಿನಲ್ಲಿ ತೊಡಗಿಕೊಳ್ಳುವವರು ತರಾತುರಿಯಲ್ಲಿ ಕೆಲಸ ಮಾಡುವವರು ಹೀಗೆ ಕಾಫಿ ಗಿಡದಲ್ಲಿ ಬಿಸಿಲು ಕಾಯಿಸುವ ಹಾವುಗಳಿಗೆ ಒಂದಿಷ್ಟು ಕೈಸೋಕಿದರೂ ಸಾಕು ಅಪಾಯ ಕಟ್ಟಿಟ್ಟ ಬುತ್ತಿ!

ಕೊಡಗಿನ ಕಾಫಿ ತೋಟವೊಂದರಲ್ಲಿ, ಕಾಫಿ ಗಿಡದಲ್ಲಿ ಹೇಗೆ ರಾಜಾರೋಷವಾಗಿ ಹಾವುಗಳು ವಿರಾಜಮಾನವಾಗಿರುತ್ತವೆ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿಯೆಂಬಂತಿದೆ.

error: Content is protected !!