ನೇಣು ಬಿಗಿದುಕೊಂಡು ನವವಿವಾಹಿತೆ ಆತ್ಮಹತ್ಯೆ

ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಪ್ರಕರಣ ನಡೆದಿದೆ.
ಮೃತಳ ಕುಟುಂಬದಿಂದ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ. ಎಂ.ಎಂ ಅಮೀರಾ (21)ಮೃತ ಮಹಿಳೆ ದುರ್ದೈವಿಯಾಗಿದ್ದಾಳೆ.

ಮಡಿಕೇರಿ ತಾಲ್ಲೂಕು ಅಯ್ಯಂಗೇರಿ ಗ್ರಾಮದಲ್ಲಿ ನಡೆದ ಘಟನೆ ಇದಾಗಿದ್ದು, ಮೃತಳ ಪತಿ ರುವೈಜ್ ಹಾಗು ಮಾವ ಕುಂಡಂಡ ಅಬ್ದುಲ್ಲಾ, ಅತ್ತೆ ಜಮೀಲಾ ನಾಪತ್ತೆಯಾಗಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.