fbpx

ನೆಹರು ಕುಟುಂಬಕ್ಕೆ ಸಾಲು ಸಾಲು ಸಂಕಟ!

ನವದೆಹೆಲಿ: ಅವ್ಯವಹಾರ ಹಾಗು ತೆರಿಗೆ ವಂಚನೆ ಆರೋಪಗಳ ಮೇಲೆ ನೆಹರು ಕುಟುಂಬದ ರಾಜೀವ್ ಗಾಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಹಾಗು ಇಂದಿರಾಗಾಂಧಿ ಮೆಮೋರಿಯಲ್ ಟ್ರಸ್ಟ್ ವಿರುದ್ಧ ಈಗ ಆರೋಪಗಳು ಕೇಳಿ ಬಂದಿರುವುದರಿಂದ ತನಿಖೆ ನಡೆಯಲಿದೆ.

ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರು ಈ ಟ್ರಸ್ಟ್ ಗಳ ವಿರುದ್ಧ ಟೀಕೆ, ಆರೋಪಗಳನ್ನು ಮಾಡಿದ್ದರು. ಅಷ್ಟೇ ಅಲ್ಲದೆ, ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಚೀನಾದಿಂದಲೂ ರಾಜೀವ್ ಗಾಂಧಿ ಫೌಂಡೇಶನ್ನಿಗೆ ಹಣ ನೀಡಲಾಗಿದೆ ಎಂದು ಆರೋಪ ಮಾಡಿದ್ದರು. ಕೆಲವು ಸುದ್ದಿ ಮಾಧ್ಯಮಗಳು ಕೂಡ ಈ ಕುರಿತು ತನಿಖಾ ವರದಿ ಮಾಡಿ ದೇಶದ ಜನತೆಯ ಮುಂದೆ ಇಟ್ಟಿದ್ದರು. ಈ ಎಲ್ಲಾದರ ಹಿನ್ನಲೆಯಲ್ಲಿ ಇಂದು ಗೃಹ ಇಲಾಖೆ ತನಿಖೆಗೆ‌ ಆದೇಶ ನೀಡಿದೆ.

error: Content is protected !!