fbpx

ನೂತನ ಶಾಲಾ ಕಟ್ಟಡ ನಿರ್ಮಿಸಿಕೊಡುವ ಭರವಸೆ

ಕೊಡಗು: ಬೀಳುವ ಹಂತದಲ್ಲಿರುವ ನೆಲ್ಲಿಹುದಿಕೇರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಶಾಲೆಯ ಕೆಲವು ಕಟ್ಟಡಗಳನ್ನು ತೆರವು ಗೊಳಿಸಿ ನೂತನವಾಗಿ ನಿರ್ಮಿಸಲು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಅಪಚ್ಚು ರಂಜನ್ ಶಾಲಾ ಆಡಳಿತಕ್ಕೆ ತಿಳಿಸಿದ್ದಾರೆ.

ಶಾಲೆಗೆ ಖುದ್ದು ಭೇಟಿ ನೀಡಿ ವೀಕ್ಷಣೆ ಮಾಡಿದ ಅವರು ಶಿಥೀಲ ಅವಸ್ಥೆಯಲ್ಲಿರುವ ಕಟ್ಟಡ ತೆರವು ಗೊಳಿಸಿ, ಶಾಲೆಯ ಆವರಣದಲ್ಲೇ ಇರುವ ವಿಶಾಲ ಜಾಗವನ್ನು ಗುರುತಿಸಿ, ಮುಂದಿನ ಕಾರ್ಯ ಕೈಗೆತ್ತಿಕೊಳ್ಳುವಂತೆ ಸೂಚಿಸಲಾಯಿತು.

error: Content is protected !!