fbpx

ನೂತನ ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘ ಅಸ್ತಿತ್ವಕ್ಕೆ

ನೂತನ ಪೊನ್ನಂಪೇಟೆ ತಾಲೂಕು ರಚನೆಯಾಗಿ ಹಲವು ತಿಂಗಳುಗಳೇ ಕಳೆದಿದೆ. ಆದರೆ, ಈ ಭಾಗದ ಜನರ ನೋವು ನಲಿವು ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪ್ರತಿಬಿಂಬಿಸಲು ಇದುವರೆಗೂ ಪತ್ರಕರ್ತರಿಗೆ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಪೊನ್ನಂಪೇಟೆ ತಾಲೂಕು ನೂತನ ಕಾರ್ಯನಿರತ ಪತ್ರಕರ್ತರ ಸಂಘ ಇಂದು ಅಸ್ತಿತ್ವಗೊಂಡಿದೆ.
ಪೊನ್ನಂಪೇಟೆಯ ಪೂವಪ್ಪ ಕಾಂಪ್ಲೆಕ್ಸ್ನ ಸಂಘದ ನೂತನ ಕಚೇರಿಯಲ್ಲಿ ಇಂದು ಸಭೆ ಸೇರಿ ನೂತನ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಹುದಿಕೇರಿಯ ಹಿರಿಯ ಪತ್ರಕರ್ತ ಕಿರಿಯಮಾಡ ರಾಜ್‌ಕುಶಾಲಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕಳೆದ ೨೮ ವರ್ಷಗಳಿಂದ ಪೊನ್ನಂಪೇಟೆ ವ್ಯಾಪ್ತಿಯ ಪತ್ರಿಕಾ ವರದಿಗಾರರಾಗಿ, ಏಜೆಂಟರಾಗಿ, ಛಾಯಚಿತ್ರಗ್ರಾಹಕರಾಗಿ, ಜನಾನುರಾಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್.ಎಸ್. ಶೈಲೇಂದ್ರ ಅವರನ್ನು ಸಂಘದ ಪ್ರದಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಸುಮಾರು ೧೪ ಮಂದಿ ಪತ್ರಕರ್ತರು ಭಾಗವಹಿಸಿದ್ದು, ಉಪಾಧ್ಯಕ್ಷರಾಗಿ ಹಿರಿಯ ಪತ್ರಕರ್ತರು ಹಾಗೂ ಛಾಯಚಿತ್ರಗ್ರಾಹಕರಾದ ಎಸ್.ಎಲ್. ಶಿವಣ್ಣ ಹಾಗೂ ಐನಂಡ ಕೆ. ಬೋಪಣ್ಣ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ. ಖಜಾಂಚಿಯಾಗಿ ಮುಕ್ಕಾಟೀರ ಕೆ. ಅರುಣ್ ಮತ್ತು ನಿರ್ದೇಶಕರುಗಳಾಗಿ ಶ್ರೀಧರ್‌ನೆಲ್ಲಿತಾಯ, ಚಟ್ಟಂಗಡ ರವಿಸುಬ್ಬಯ್ಯ, ಕೇಶವ ಕಾಮತ್, ಡಾ. ಜೆ. ಸೋಮಣ್ಣ, ಚಮ್ಮಟ್ಟೀರ ಪ್ರವೀಣ್‌ಉತ್ತಪ್ಪ, ಅಣ್ಣೀರ ಹರೀಶ್‌ಮಾದಪ್ಪ, ಟಿ.ಎಲ್. ಶ್ರೀನಿವಾಸ್, ಜಗದೀಶ್ ಜೋಡುಬೀಟಿ, ಮನೋಜ್ ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಕಿರಿಯಮಾಡ ರಾಜ್‌ಕುಶಾಲಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಶೈಲೇಂದ್ರ ಇವರು ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಪತ್ರಕರ್ತರ ಕ್ರೀಡೋತ್ಸವ, ಪ್ರವಾಸ ಕಾರ್ಯಕ್ರಮ, ಕ್ಷೇಮಾಭಿವೃದ್ದಿ ನಿಧಿ ಸ್ಥಾಪನೆ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಂಘದ ಸದಸ್ಯರಿಗೆ ನಿವೇಶನ, ವಸತಿ ಹಾಗೂ ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕಲ್ಪಿಸುವ ಉದ್ದೇಶವು ಇದೆ ಎಂದು ಹೇಳಿದರು.

error: Content is protected !!