ನೂತನ ತಾಲ್ಲೂಕಿಗೆ ಕಂದಾಯ ಇಲಾಖೆ ಆರಂಭ

ನೂತನ ತಾಲ್ಲೂಕು ಕುಶಾಲನಗರದ ಕಂದಾಯ ಇಲಾಖೆಯಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಲಾಗಿದೆ.
ಸಕಾಲ ಮಾದರಿಯಲ್ಲಿ ಕೆ ಎಸ್ ಎಂ ಎಸ್ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ತಹಶೀಲ್ದಾರ್ ಕಚೇರಿ ನಲ್ಲಿ ಸೌಕರ್ಯ ಕಲ್ಪಿಸಲಾಗಿದೆ. ಪೊನ್ನಂಪೇಟೆ, ವಿರಾಜಪೇಟೆ ಬಳಿಕ ಕುಶಾಲನಗರದಲ್ಲಿ ಅನುಷ್ಠಾನ ಮಾಡಲಾಗಿದೆ. ಮೊಬೈಲ್ ಮೂಲಕ ಕಂದಾಯ ಇಲಾಖೆ ಮಾಹಿತಿ ಪಡೆಯಬಹುದಾಗಿದೆ ಎಂದು ಉಪ ಜಿಲ್ಲಾಧಿಕಾರಿ ಈಶ್ವರ್ ಕುಮಾರ್ ಖಂಡು ಮಾಹಿತಿ ನೀಡಿದ್ದಾರೆ.