fbpx

ನೀವೂ ಸೈಕಲ್ ಚಲಾಯಿಸುತ್ತೀರಾ?!

ಯಾರು ಸೈಕಲ್ ಹೊಡೆದಿಲ್ಲ ಹೇಳಿ… ನೀವು ನಾವು ಎಲ್ಲರೂ ಸೈಕಲ್ ಹೊಡೆದವರೇ. ನೀವು ಸೈಕಲ್ ಕಲಿತೇ ಇಲ್ಲ… ಇನ್ನು ಓಡಿಸೋದು ಹೇಗೆ ಹೇಳಿ? ಅಂತ ಕೆಲವರು ಹೇಳಬಹುದು. ಒಂದು ಉದ್ಯೋಗ ಇಲ್ಲದೆ ಯಾವ್ಯಾವ್ದೋ ಕೆಲಸ ಮಾಡುತ್ತಾ ಕಾಲಹರಣೆ ಮಾಡುವುದಕ್ಕೂ ಸೈಕಲ್ ಹೊಡೆಯೋದು ಅಂತಾರೆ. ಸೈಕಲ್ ಬಗ್ಗೆ ಯಾಕೆ ಹೀಗೆ ತಲೆಗೆ ಡ್ರಿಲ್ ಮಾಡ್ತಿದ್ದಾನೆ ಅಂದ್ಕೊಂಡ್ರಾ?


ಇವತ್ತು ಸೈಕಲ್ ದಿನಾಚರಣೆ ರ್ರೀ…
2 ಶತಮಾನಗಳಿಂದ ಬಳಕೆಯಲ್ಲಿರುವ ಸೈಕಲ್ ಸರಳತೆ, ಅಗ್ಗದ ವೆಚ್ಚದ, ನಿಸರ್ಗಕ್ಕೆ ಯಾವುದೇ ಹಾನಿಯನ್ನು ಉಂಟು ಮಾಡದಿರುವ ವಾಹನ. ಪ್ರೊ.ಲೆಜೆ಼ಕ್ ಸಿಬಿಲಿಸ್ಕಿ ಅಮೇರಿಕಾದಿಂದ ವಿಶ್ವ ಸೈಕಲ್ ದಿನಾಚರಣೆಗೆ ಆಂಧೋಲನವನ್ನು ಮಾಡಿ ಯಶಸ್ವಿಯಾದರು. ಅಲ್ಲಿಂದ ಸೈಕಲ್ ದಿನದ ಆಚರಣೆ ಶುರುವಾಯಿತು.
‘ಸುಸ್ಥಿರ ಬಳಕೆ ಹಾಗು ಸುಸ್ಥಿರ ಸಂಚಾರ ವ್ಯವಸ್ಥೆಗೆ ಸೈಕಲ್ ಪೂರಕವಾಗಿದ್ದು, ಪರಿಸರ ಸ್ನೇಹಿಯಾಗಿರುವುದರಿಂದ ಈ ದಿನವನ್ನು ಸೈಕಲ್ ದಿನಾಚರಣೆ ಎಂದು ಗುರುತಿಸಿದೆ ವಿಶ್ವಸಂಸ್ಥೆ.

2018ರಲ್ಲಿ ಘೋಷಿತವಾದ ಸೈಕಲ್ ದಿನಾಚರಣೆಗೆ ನಾವು ಬೆಂಬಲಿಸಿ, ಸಂಚಾರಕ್ಕೆ ಆದಷ್ಟು ಪರಿಸರ ಸ್ನೇಹಿ ಸೈಕಲ್ ಗಳನ್ನೇ ಬಳಸೋಣ ಏನಂತೀರಾ?

error: Content is protected !!