ನೀರಿನಲ್ಲಿ ಮುಳುಗಿ ಇಬ್ಬರ ಬಲಿ

ಪ್ರವಾಸಕ್ಕೆಂದು ಹಾಸನ ಜಿಲ್ಲೆಯ ಮೂಕನಮನೆ ಜಲಪಾತದ ನೀರಿನಲ್ಲಿ ತೆರಳಿದ್ದ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಯ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಕೊಡ್ಲಿಪೇಟೆ ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾಕುಂದ ಗ್ರಾಮದ ನಿವಾಸಿ ಮರದ ಕಾರ್ಮಿಕ ಕುಮಾರ( 39),ಬ್ಯಾಡಗೊಟ್ಟದ ಟ್ಯಾಕ್ಸಿ ಚಾಲಕ ಕಿಶೋರ್( 34) ಮೃತರಾಗಿದ್ದಾರೆ.

ಜಲಪಾತದ ನೀರು ಬೀಳುವ ಸ್ಥಳದಲ್ಲಿ ಈಜುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಸುದ್ದಿ ತಿಳಿದು ಮೃತದೇಹ ವನ್ನ್ನು ಮುಳುಗು ತಜ್ಞರು ಹೊರ ತೆಗಿಯಲಾಗಿದೆ.ಸಕಲೇಶಪುರ,ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!