ನೀತಿ ಸಂಹಿತೆ ಉಲ್ಲಂಘನೆ; ದೂರು ದಾಖಲು

ಕೊಡಗು: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಸಂಬಂಧ ಸರ್ಕಾರಿ ಆದೇಶವನ್ನು ಉಲ್ಲಂಘಿಸಿದ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅವರು ತಿಳಿಸಿದ್ದಾರೆ.
ರಾಜಕೀಯ ಮುಖಂಡರ ಜೊತೆಗಿನ ಛಾಯಾಚಿತ್ರ ಮತ್ತು ಕಿರುಹೊತ್ತಿಗೆ ಮುದ್ರಿಸಿ ಅದರಲ್ಲಿ ವೈಯಕ್ತಿಕವಾಗಿ ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಉಲ್ಲೇಖಿಸಿ ಪ್ರಚಾರ ಕೈಗೊಂಡ ಆರೋಪದಡಿ ಕೂಡುಮಗಳೂರು ಹುಲುಗುಂದ ಗ್ರಾಮದ ಭಾಸ್ಕರ ನಾಯಕ್.
ಹಾಗೆಯೇ ಚಿಹ್ನೆ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರ ವೀಡಿಯೋಗಳ ಮೂಲಕ ಪ್ರಚಾರ ನಡೆಸಿದ ಆರೋಪದಡಿ ಅಯ್ಯಂಗೇರಿಯ ಅಬ್ದುಲ್ ರಶೀದ್, ಕಾವೇರಮ್ಮ, ಮಿಶ್ರಿಯಾ ಇವರುಗಳ ವಿರುದ್ಧ ಭಾರತೀಯ ದಂಡ ಸಂಹಿತೆ, 1860 ರ ಕಲಂ 188ರ ಮೇರೆಗೆ ಕುಶಾಲನಗರ ಮತ್ತು ಮಡಿಕೇರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಗಳಲ್ಲಿ ಸಂಬಂಧಪಟ್ಟ ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.