fbpx

ನಿರ್ನಾಲ್ ತಿಂಗಳ ಪರ್ಚಯ..

ಗೌಡ ಜನಾಂಗದ ಅರೆಭಾಸೆ ತಿಂಗಗಳ ಪ್ರಕಾರ ಇಂದ್ಂದ ನಿರ್ನಾಲ್ ತಿಂಗ ಸುರು. ಈ ತಿಂಗ ಕನ್ಯಾ ಸಂಕ್ರಮಣ ಕಳ್ದ ಮಾರನೇ ದಿನಂದ ಸುರಾಗಿ ತುಲಾ ಸಂಕ್ರಮಣ ಮುಟ್ಟ ಇದ್ದದೆ. ಅಂದರೇ (ಸೆಪ್ಟೆಂಬರ್ 15 ರ್ಂದ ಆಕ್ಟೋಬರ್ 15) ಕ್ಕೆ ಮುಟ್ಟ.

ಈ ತಿಂಗಳ್ಲಿ ಮಳೆ ಕಮ್ಮಿ ಅಗಿ ಬಿಸ್ಲ್ ಬಂದದೆ. ಉತ್ತರ, ಹಸ್ತ , ಚಿತ್ತಾ ನಕ್ಷತ್ರದ ಮಳೆ ಮದ್ಯ ಮದ್ಯಲ್ಲಿ ಒಳ್ಳ ರಭಸನ ತೋರ್ಸಿದೆ. ಮಳೆ ಈಗ ಪಂಡ್ ಕಾಲದಂಗೆ ಇಲ್ಲೆ ಹೇಳಿ, ಕೇಳಿ ಬರ್ತ ಇಲ್ಲೆ ಕಾಲ ಬದ್ಲಟ್ಟು. ಈ ತಿಂಗಳ್ಲಿ ನವರಾತ್ರಿ ಹಬ್ಬ , ಆಯುಧ ಪೂಜೆ, ಶಾರದಾ ಪೂಜೆ, ದುರ್ಗಾಷ್ಠಮಿ, ಮಹಾಲಯ ಅಮಾವಾಸ್ಯೆ, ದಸರಾ, ತಿರುಪತಿ ಬ್ರಹ್ಮೋತ್ಸವ ಬಂದದೆ.

ಮದುವೆ ಜಂಬರಗ, ಶುಭ ಕಾರ್ಯಗ ಜಾಸ್ತಿ ಇದ್ದದೆ. ಇನ್ನ್ ತ್ವಾಟಲ್ಲಿ ಕಾಡ್ ಕಡಿಯೋದು, ಹೊಸ ತ್ವಾಟ ಮಾಡ್ದು,ಗದ್ದೆಲ್ಲಿ ಕಳೆ ಕೆಲ್ಸ ಹಿಂಗೆ ಒಂದಲ್ಲ ಒಂದು ಕೆಲ್ಸ ಇದೆ ಇದ್ದದೆ. ಸುಮಾರ್ ತರದ ಹಣ್ಣ್ ಗ ಸಿಕ್ಕಿದೆ ಹಂಗೆ ಈ ತಿಂಗಳ್ಲಿ ಬೆಳಂಜಿರ, ಸುಳೆರಿ, ಹರಳ್, ಹೆಗ್ಗಲ್ ಅಳ್ಂಬು ಸಿಕ್ಕಿದೆ.

ತ್ವಾಟಲ್ಲಿ ಕಾಫಿ, ಒಳ್ಳೆಮೆಣ್ಸ್, ಅಡಿಕೆ ಒಳ್ಳ ಬೆಳವಣಿಗೆನ ಹಂತಲ್ಲಿ ಇದರೆ ಭತ್ತದ ನಾಟಿ ಕರಿ ನಾಟಿ ಹತ್ತಿಕಂಡ್ ಇದ್ದದೆ.

ಇದ್ದಿಷ್ಟ್ ನಿರ್ನಾಲ್ ತಿಂಗಳ ವಿಶೇಷ ಅವ್ಟು. ನಿಮ್ಮ ಸಲಹೆ ಸೂಚನೆಗ ಏನರ್ ಇದರೆ ಸಿದಾ ನಂಗೆ ತಿಳ್ಸಿ ಇನ್ನ್ ಮುಂದೆ ಬರುವ ಬೆಳ್ತಿಂಗಳ ಪರ್ಚಯದೊಟ್ಟಿಗೆ ಕಾಂಬನೋ ಎಲ್ಲಾವುಕ್ಕೂ

✍🏻 ಉಳುವಾರನ ರೋಶನ್ ವಸಂತ್, ಕಾಂತೂರು.

error: Content is protected !!